Connect with us

LATEST NEWS

ಹಣಕ್ಕಾಗಿ ಬೆದರಿಕೆ ಕರೆ – ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲು

ಮಂಗಳೂರು ಫೆಬ್ರವರಿ 09: ಫಾಝಿಲ್ ಹತ್ಯೆ ಆರೋಪಿಗಳಿಗೆ ನೆರವು ನೀಡುವಂತೆ ವ್ಯಕ್ತಿಯೊಬ್ಬ ಕರೆ ಮಾಡಿರುವ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಫೆಬ್ರವರಿ 2ರಂದು ಬೆಳಿಗ್ಗೆ 11.40ರ ಸಮಯದಲ್ಲಿ ನಾನು ಕೋಟೆಕಾರ್ ಗ್ರಾಮದ ಮಾಡೂರು ಸೊವುರ್ ಎಂಬಲ್ಲಿ ಇದ್ದಾಗ ಹರ್ಷಿತ್ ಎಂಬಾತ ಮೊಬೈಲ್‌ನಿಂದ ಕರೆ ಮಾಡಿದ್ದ. ಸುರತ್ಕಲ್‌ನಲ್ಲಿ ಫಾಝಿಲ್ ಎಂಬಾತನನ್ನು ಕೊಲೆ ಮಾಡಿ ಜೈಲಿಗೆ ಹೋಗಿ ಜಾಮೀನಿನಲ್ಲಿ ಹೊರಗೆ ಬಂದಿದ್ದೇನೆ. ನನಗೆ ಮತ್ತು ಜೈಲಿನೊಳಗೆ ಇರುವವರಿಗೆ ನೀವು ಹಣದ ಸಹಾಯ ಮಾಡಬೇಕು’ ಕೇಳಿದ್ದ. ‘ಮುಂದೆ ಸಮಸ್ಯೆಯಾದರೆ ನಮ್ಮನ್ನು ದೂರ ಬೇಡಿ’ ಎಂದು ಹೆದರಿಸಿದ್ದ’ ಎಂದು ವ್ಯಕ್ತಿಯೊಬ್ಬರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ‘ಈ ವ್ಯಕ್ತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ದೂರು ನೀಡಿರುವ ವ್ಯಕ್ತಿ ಕೋರಿದ್ದಾರೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

 

Advertisement
Click to comment

You must be logged in to post a comment Login

Leave a Reply