Connect with us

    FILM

    ರಾಖಿ ಸಾವಂತ್ ಹಿಂದೆ ಹೋದ ಮೈಸೂರಿನ ಹುಡುಗ ಆದಿಲ್ ಖಾನ್ ಈಗ ಜೈಲಿಗೆ

    ಮುಂಬೈ ಫೆಬ್ರವರಿ 09 : ಬಾಲಿವುಡ ನಟಿ ರಾಖಿ ಸಾವಂತ್ ನ ಮದುವೆಯಾದ ಮೈಸೂರಿನ ಹುಡುಗ ಆದಿಲ್ ಖಾನ್ ಇದೀಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.


    ಮೂರು ದಿನಗಳ ಹಿಂದೆಯಷ್ಟೇ ಪತಿ ಆದಿಲ್ ಖಾನ್ ದುರಾನಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ರಾಖಿ ಸಾವಂತ್. ಅದೇ ಸಂಜೆ ರೆಸ್ಟೋರೆಂಟ್ ನಲ್ಲಿ ಆದಿಲ್ ಖಾನ್ ಜೊತೆ ಊಟ ಮಾಡುತ್ತಿದ್ದ ವಿಡಿಯೋವನ್ನೂ ಹಂಚಿಕೊಂಡಿದ್ದರು. ಆದಿಲ್ ನನ್ನ ಬಳಿ ಕ್ಷಮೆ ಕೇಳಲು ಬಂದಿದ್ದ, ನಾನು ಕ್ಷಮಿಸಲಿಲ್ಲ ಎಂಬ ಹೇಳಿಕೆ ನೀಡಿದ್ದರು. ಆನಂತರ ತನ್ನನ್ನು ಭೇಟಿ ಮಾಡಲು ಮನೆಗೆ ಬಂದಿದ್ದ ಆದಿಲ್ ನನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದರು. ಇದೀಗ ನ್ಯಾಯಾಲಯ ಆದಿಲ್ ಖಾನ್ ಗೆ 14 ದಿನಗಳ ನ್ಯಾಯಂಗ ಬಂಧವ ವಿಧಿಸಿದೆ.

     

    ಆದಿಲ್ ಖಾನ್ ವಿರುದ್ಧ ಸೆಕ್ಷನ್ 406, 323, 377, 498A ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅದಿಲ್ ಖಾನ್ ದುರಾನಿ ಬಂಧನಕ್ಕೊಳಗಾಗಿದ್ದಾರೆ. ಓಶಿವಾರ ಪೊಲೀಸ್‌ ಸ್ಟೇಷನ್‌ನಲ್ಲಿ ಆದಿಲ್ ಖಾನ್ ಅರೆಸ್ಟ್ ಆದ ಬಳಿಕ ಮಾಧ್ಯಮಗಳ ಜೊತೆ ರಾಖಿ ಸಾವಂತ್ ಮಾತನಾಡಿದರು. ಈ ವೇಳೆ ತಲೆ ಸುತ್ತು ಬಂದು ರಾಖಿ ಸಾವಂತ್ ಕುಸಿದುಬಿದ್ದರು.

    ’ನಾನು ಆದಿಲ್‌ನ ಅನೇಕ ಬಾರಿ ಕ್ಷಮಿಸಿದ್ದೇನೆ. ನನಗೆ ಅವನ ಮೇಲೆ ಪ್ರೀತಿ ಇತ್ತು. ಎಷ್ಟೋ ಕನಸುಗಳನ್ನ ಕಟ್ಟಿಕೊಂಡಿದ್ದೆ. ಆದ್ರೆ, ಆದಿಲ್ ಎಲ್ಲವನ್ನೂ ಮುಗಿಸಿಬಿಟ್ಟ. ಆದಿಲ್‌ ನನ್ನ ಮೇಲೆ ಅನೇಕ ಬಾರಿ ಹಲ್ಲೆ ಮಾಡಿದ್ದಾನೆ. ನನಗೆ ಹಿಂಸೆ ಆಗಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಆದಿಲ್ ವಿರುದ್ಧ ಕ್ರಿಮಿನಲ್ ರೆಕಾರ್ಡ್ಸ್ ಇವೆ. ಮದುವೆಗೂ ಮುನ್ನವೇ ನನಗೆ ಈ ವಿಷಯಗಳು ಗೊತ್ತಾಗಿದ್ದರೆ, ನಾನು ಮದುವೆ ಆಗುತ್ತಿರಲಿಲ್ಲ. ಕುರಾನ್ ಮೇಲೆ ಪ್ರಮಾಣ ಮಾಡಿಯೂ, ಮೋಸ ಮಾಡುತ್ತಲೇ ಇದ್ದ’’ ಎಂದರು ರಾಖಿ ಸಾವಂತ್.

     

    Share Information
    Advertisement
    Click to comment

    You must be logged in to post a comment Login

    Leave a Reply