Connect with us

LATEST NEWS

ಮಂಗಳೂರಿನಲ್ಲಿ ಮತ್ತೋರ್ವ ಹಿಂದೂ ಯುವಕನ ಹತ್ಯೆಗೆ ಬಹಿರಂಗ ಬೆದರಿಕೆ

ಮಂಗಳೂರಿನಲ್ಲಿ ಮತ್ತೋರ್ವ ಹಿಂದೂ ಯುವಕನ ಹತ್ಯೆಗೆ ಬಹಿರಂಗ ಬೆದರಿಕೆ

‘ಟ್ರೂ ಮೀಡಿಯಾ ನೆಟ್ವರ್ಕ್’ ಎಂಬ ಪೇಜ್ ಮೂಲಕ  ಯುವಕನಿಕೆ ಬಹಿರಂಗ ಬೆದರಿಕೆ

ಮಂಗಳೂರು,ಜನವರಿ 05: ಮಂಗಳೂರಿನ ಸುರತ್ಕಲ್  ಕಾಟಿಪಳ್ಳದಲ್ಲಿ ಹಿಂದೂ ಕಾರ್ಯಕರ್ತ ದೀಪಕ್ ರಾವ್ ಹತ್ಯೆಯಾದ ಬೆನ್ನಲ್ಲೆ ಇದೀಗ ಮತ್ತೋರ್ವ ಹಿಂದೂ ಯುವಕನ ಹತ್ಯೆಗೆ ಬಹಿರಂಗ ಬೆದರಿಕೆ ಬಂದಿದೆ.‘

ಟ್ರೂ ಮೀಡಿಯಾ ನೆಟ್ವರ್ಕ್’ ಎಂಬ ಪೇಜ್ ಮೂಲಕ  ಯುವಕನಿಕೆ ಬಹಿರಂಗ ಬೆದರಿಕೆ ಹಾಕಲಾಗಿದೆ.

” ಸುಬ್ಬು ಎಂಬ ಯವಕನಿಗೆ ತೊಡೆಯಲ್ಲಿ ಕಾಲ್ ಕಿಲೊ ಮಾಂಸ ಇಲ್ಲ “

“ಪೊಗರು ಜಾಸ್ತಿ ಮಾಡ್ಬೇಡ. ನೀನು ಎಲ್ಲಾದ್ರು ಬೀದಿ ಹೆಣವಾಗ್ತಿಯ ಅಷ್ಟೇ”

“ಮರ್ಯಾದೆಯಾಗಿ ಕುಟುಂಬ ಸಾಕಲು ಕಲಿ. ಎಲ್ಲಾದ್ರೂ ದುಡಿ”

ಮತ್ತೆ ಮತ್ತೆ ಜಿಹಾದಿ ಜಿಹಾದಿ ಅಂತ ಬೊಬ್ಬೆ ಹೊಡೆದರೆ ತಾಳ್ಮೆ ಕಳೆದುಕೊಂಡು ನಿನ್ನ ಬೀದಿ ಹೆಣ ಮಾಡಿ ಬಿಸಾಕ್ತಾರೆ ಅಷ್ಟೇ”

ಈ ಬಹಿರಂಗ ಎಚ್ಚರಿಕೆ ಜಿಲ್ಲೆ ಜನರಲ್ಲಿ ಭಯದ ವಾತಾವರಣ ನಿರ್ಮಿಸಿದೆ. ಎರಡು ದಿನಗಳ ಹಿಂದೆಯಷ್ಟೇ ಕಾಟಿಪಳ್ಳದಲ್ಲಿ ಹಿಂದೂ ಕಾರ್ಯಕರ್ತ ದೀಪಕ್ ರಾವ್ ಕೊಲೆ ನಡೆದಿತ್ತು. ದುಷ್ಕರ್ಮಿಗಳು‌ ದೀಪಕ್ತ ರಾವ್ ಮೇಲೆ ತಲವಾರುಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದರು. ಆದರೆ ಜೀವದ ಹಂಗು ತೊರೆದು ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯಿಂದ ನಾಲ್ವರನ್ನು ಬಂಧಿಸಿದ್ದರು.

ಟ್ರೂ ಮೀಡಿಯಾ ನೆಟ್ ವರ್ಕ್ ಬೆದರಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Advertisement
Click to comment

You must be logged in to post a comment Login

Leave a Reply