Connect with us

  LATEST NEWS

  ಕಸ್ಟಮ್ಸ್ ಅಧಿಕಾರಿಗಳಿಗೆ ಚಳ್ಳೆಹಣ್ಣು: ಆರೋಪಿ ಪರಾರಿ

  ಮಂಗಳೂರು,ಸೆಪ್ಟೆಂಬರ್ 15 : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಅಕ್ರಮ ಗಾಂಜಾ ಸಾಗಾಟ ಪ್ರಕರಣದ ಆರೋಪಿ ಅಧಿಕಾರಿಗಳ ಕಸ್ಟಡಿಯಿಂದ ಪರಾರಿಯಾಗಿದ್ದಾನೆ. ವಿದೇಶಕ್ಕೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಕೇರಳದ ಕಾಸರಗೋಡು ಮಹಮ್ಮದ್ ಹನೀಫ್ ನನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳು ಬಂಧಿಸಿದ್ದರು. ಬಂಧಿತ ಹನೀಫ್ ನಿಂದ 5 ಕೆ ಜಿ. ಗಾಂಜಾವನ್ನು ವಶಪಡಿಸಿಕೊಂಡಿದ್ದರು.

  ಈ ಪ್ರಕರಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಬೇಜವ್ದಾರಿ ಎದ್ದು ಕಾಣುತ್ತಿದೆ. ವಿಮಾನ ನಿಲ್ದಾಣದಲ್ಲಿ ಗಾಂಜಾ ಸಮೇತ ಮಹಮ್ಮದ್ ಹನೀಫ್ ನನ್ನು ವಶಕ್ಕೆಪಡೆದ ಕಸ್ಟಮ್ಸ್ ಅಧಿಕಾರಿಗಳು, ವಿಮಾನ ನಿಲ್ದಾಣದಲ್ಲಿರುವ ಕಸ್ಟಮ್ಸ್ ಕಚೇರಿಯ ಕೊಠಡಿಯೊಂದರಲ್ಲಿ ವಿಚಾರಣೆ ನಡೆಸುತ್ತಿದ್ದರು.

  ಈ ಸಂದರ್ಭದಲ್ಲಿ ಇನ್ನೊಂದು ವಿಮಾನ ಬಂದಿಳಿದ ಕಾರಣ ಅಧಿಕಾರಿಗಳು ಮಹಮ್ಮದ್ ಹನೀಫನನ್ನು ಕೊಠಡಿಯಲ್ಲಿ ಬಿಟ್ಟು ಕರ್ತವ್ಯಕ್ಕೆ ತೆರಳಿದ್ದಾರೆ. ಈ ಸಂದರ್ಭ ಉಪಯೋಗಿಸಿದ ಹನೀಫ್ ಚಾಣಾಕ್ಷತಣದಿಂದ ಪರಾರಿಯಾಗಿದ್ದಾನೆ.

  ಹನೀಫ್ ಪರಾರಿಯಾಗುತ್ತಿರುವುದನ್ನು ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿ ಗಮನಿಸಿ ತಕ್ಷಣ ಸಿಐಎಸ್ ಎಫ್ ಭದ್ರತಾ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ ಕಸ್ಟಮ್ಸ್ ಅಧಿಕಾರಿಗಳು ಎಚ್ಚತ್ತುಕೊಳ್ಳುವಷ್ಟರಲ್ಲಿ ಹನೀಫ್ ಎಸ್ಕೇಪ್ ಆಗಿದ್ದಾನೆ. ಕೇರಳ ಕಾಸರಗೋಡಿನ ಮಹಮ್ಮದ್ ಹನೀಫ್ ಗಲ್ಫ್ ರಾಷ್ಟ್ರ ದೋಹಾಕ್ಕೆ ಹೋಗಲು ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದನು.

  Share Information
  Advertisement
  Click to comment

  You must be logged in to post a comment Login

  Leave a Reply