Connect with us

    FILM

    ತಮಿಳಿನ ಖ್ಯಾತ ಚಿತ್ರ ನಿರ್ದೇಶಕ ಬಾಲ ದಾಂಪತ್ಯ ಅಂತ್ಯ…!!

    ಚೆನ್ನೈ: ಸಿನೆಮಾ ರಂಗದಲ್ಲಿ ಇತ್ತೀಚೆಗೆ ವಿವಾಹ ವಿಚ್ಚೇದನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಬಾಲ ತಮ್ಮ 18 ವರ್ಷಗಳ ದಾಂಪತ್ಯವನ್ನು ಕೊನೆಗಾಣಿಸಿದ್ದಾರೆ.


    ಬಾಲ ಅವರು ತಮ್ಮ ಪತ್ನಿ ಮುತ್ತುಮಲಾರ್ ​ಅವರಿಗೆ ವಿಚ್ಛೇದನ ನೀಡಿದ್ದಾರೆ. ಇಬ್ಬರ ಮಧ್ಯೆ ವಿರಸ ಕಂಡುಬಂದು ಕಳೆದ ಕೆಲ ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ದಂಪತಿ ಈಗ ವಿಚ್ಛೇದನ ಪಡೆದಿದ್ದಾರೆ. ಈ ಮೂಲಕ 18 ವರ್ಷದ ದಾಂಪತ್ಯ ಜೀವನ ಅಂತ್ಯವಾಗಿದೆ.


    ಮೊನ್ನೆ ಮಾರ್ಚ್ 5ರಂದು ಚೆನ್ನೈಯ ಕೌಟುಂಬಿಕ ನ್ಯಾಯಾಲಯದಲ್ಲಿ ಅಧಿಕೃತವಾಗಿ ಬೇರ್ಪಟ್ಟಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಇವರು ಇತ್ತೀಚೆಗೆ ಪರಸ್ಪರ ಒಪ್ಪಿಗೆ ಮೇರೆಗೆ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿ ಕಾನೂನಾತ್ಮಕವಾಗಿ ಬೇರೆಯಾಗಿದ್ದಾರೆ. ಇವರಿಗೆ ಒಬ್ಬ ಮಗಳಿದ್ದಾಳೆ. ನಿರ್ದೇಶಕ ಬಾಲ ಹಾಗೂ ಮಲಾರ್​ ಅವರು 2004ರ ಜುಲೈ 7ರಂದು ಮಧುರೈನಲ್ಲಿ ಮದುವೆ ಆಗಿದ್ದರು.

     

    Share Information
    Advertisement
    Click to comment

    Leave a Reply

    Your email address will not be published. Required fields are marked *