LATEST NEWS
ರಷ್ಯಾದ 2 ಷರತ್ತು ಒಪ್ಪಿಕೊಂಡ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿ…!!
ಉಕ್ರೇನ್ : ರಷ್ಯಾ ಮತ್ತು ಯುಕ್ರೇನ್ ನಡುವೆ ನಡೆಯತ್ತಿರುವ ಯುದ್ದ ಸದ್ಯ ಮುಗಿಯುವ ಹಂತಕ್ಕೆ ಬರಲಾರಂಭಿಸಿದ್ದು, ಮಹತ್ವದ ಬೆಳವಣಿಗೆಯಲ್ಲಿ ನ್ಯಾಟೋ ಸದಸ್ಯತ್ವಕ್ಕೆ ನಾವು ಪಟ್ಟು ಹಿಡಿಯುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿ ಹೇಳಿದ್ದಾರೆ.
ಉಕ್ರೇನ್ ಸರ್ಕಾರವು ರಷ್ಯಾ ವಿರುದ್ಧದ ಒಕ್ಕೂಟವಾದ 30 ಪಾಶ್ಚಾತ್ಯ ದೇಶಗಳ ನ್ಯಾಟೋ ಸೇರ್ಪಡೆ ಆಗಲು ಮುಂದಾಗಿದ್ದೇ ಯುದ್ಧಕ್ಕೆ ಮೂಲಕ ಕಾರಣವಾಗಿತ್ತು. ಆದರೆ ಇದೀಗ ರಷ್ಯಾ ಪಟ್ಟಿಗೆ ಮಣಿದಿರುವ ಝೆಲೆನ್ಸ್ಕಿ, ನ್ಯಾಟೋ ಕುರಿತ ನಮ್ಮ ನಿಲುವಿನಿಂದ ಹಿಂದೆ ಸರಿದಿದ್ದೇವೆ. ನಮ್ಮನ್ನು ನ್ಯಾಟೋ ಒಪ್ಪಿಕೊಳ್ಳಲು ತಯಾರಿಲ್ಲ, ನ್ಯಾಟೋ ಪಡೆಗಳಿಗೆ ರಷ್ಯಾ ಬಗ್ಗೆ ಹೆದರಿಕೆ ಇದೆ. ಮಂಡಿಯೂರಿ ನ್ಯಾಟೋ ಸದಸ್ಯತ್ವ ಕೇಳಲಾಗಲ್ಲ. ಹೀಗಾಗಿ ನ್ಯಾಟೋ ಸದಸ್ಯತ್ವ ಪಡೆಯಲ್ಲ ಅಂತ ಝೆಲೆನ್‌ಸ್ಕಿ ಹೇಳಿದ್ದಾರೆ.
ಉಕ್ರೇನ್‌ನಿಂದ ಸ್ವಾಯತ್ತೆ ಬಯಸುತ್ತಿರುವ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಸಿದ್ಧನಿದ್ದೇನೆ ಎಂದೂ ಜೆಲೆನ್‌ಸ್ಕಿ ತಿಳಿಸಿದ್ದು ಯುದ್ಧ ಅಂತ್ಯವಾಗುವ ಸಾಧ್ಯತೆಯಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.
ಯುದ್ಧ ನಿಲ್ಲಿಸಬೇಕಾದರೆ ರಷ್ಯಾ 4 ಷರತ್ತನ್ನು ಉಕ್ರೇನ್‌ಗೆ ವಿಧಿಸಿತ್ತು. ಈ 4 ಷರತ್ತನ್ನು ಒಪ್ಪಿಕೊಳ್ಳುವವರೆಗೂ ಯುದ್ಧ ನಿಲ್ಲಿಸುವುದೇ ಇಲ್ಲ ಎಂದು ರಷ್ಯಾ ಸಂಧಾನ ಸಭೆಯಲ್ಲಿ ಖಡಕ್ ಆಗಿ ಹೇಳಿತ್ತು.