Connect with us

DAKSHINA KANNADA

ಕರ್ತವ್ಯಕ್ಕೆ ಹೊರಟು ನಿಂತಿದ್ದ ಪೊಲೀಸ್ ಪೇದೆ ಹೃದಯಾಘಾತದಿಂದ ಸಾವು..

ಪುತ್ತೂರು : ಕರ್ತವ್ಯಕ್ಕೆ ಹೊರಟು ನಿಂತ ಪೋಲೀಸ್ ಪೇದೆಯೊಬ್ಬರು ಹೃದಯಾಘಾತದಿಂದ ಸಾವಿಗೀಡಾದ ಘಟನೆ ಮಾರ್ಚ್ 9 ರಂದು ಪುತ್ತೂರಿನ ಸಂಪ್ಯದಲ್ಲಿ ನಡೆದಿದೆ. ಅವರಿಗೆ 42 ವರ್ಷ ವಯಸ್ಸಾಗಿತ್ತು.


ಸಂಪ್ಯ ಪೋಲೀಸ್ ಠಾಣೆಯ ಸಿಬ್ಬಂದಿ ಗಣೇಶ್ ಹೃದಯಾಘಾತದಿಂದ ಸಾವಿಗೀಡಾದ ಪೇದೆಯಾಗಿದ್ದು, ಕೇರಳ-ಕರ್ನಾಟಕ‌ ಗಡಿಯಾಗ ಸ್ವರ್ಗ‌ ಎಂಬಲ್ಲಿ ಗಣೇಶ್ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಕೂಡಾ ಎಂದಿನಂತೆ ಕರ್ತವ್ಯಕ್ಕೆ ಹೊರಟು ನಿಂತಿದ್ದ ಸಂದರ್ಭ‌ ಈ ಘಟನೆ ನಡೆದಿದ್ದು, ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಪೋಲೀಸ್‌ ಅಧಿಕಾರಿಗಳು ಗಣೇಶ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.

Advertisement
Click to comment

You must be logged in to post a comment Login

Leave a Reply