Connect with us

LATEST NEWS

ಹದಿಹರೆಯದ ಮಗಳ ಮಾರಾಟ, ಮಗ ಹಾಸ್ಟೆಲ್‌ಗೆ; ಮಹಿಳೆ ಪ್ರಿಯಕರನೊಂದಿಗೆ ಪರಾರಿ…!

ತನ್ನ ಹದಿಹರೆಯದ ಮಗಳನ್ನು ಉದ್ಯಮಿಗೆ ಮಾರಾಟ ಮಾಡಿ.ಮಗನನ್ನು ಹಾಸ್ಟೆಲ್‌ನಲ್ಲಿ ಬಿಟ್ಟು ಮಹಿಳೆಯೋರ್ವಳು ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಇತ್ತ ಹಾಸ್ಟೆಲ್ ಶುಲ್ಕ ಪಾವತಿಸದ ಬಗ್ಗೆ ಆಡಳಿತ ಮಂಡಳಿ ಆತನ ಕುಟುಂಬಕ್ಕೆ ಮಾಹಿತಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಪಾಟ್ನಾ: ತನ್ನ ಹದಿಹರೆಯದ ಮಗಳನ್ನು ಉದ್ಯಮಿಗೆ ಮಾರಾಟ ಮಾಡಿ.ಮಗನನ್ನು ಹಾಸ್ಟೆಲ್‌ನಲ್ಲಿ ಬಿಟ್ಟು ಮಹಿಳೆಯೋರ್ವಳು ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ.


ಇತ್ತ ಹಾಸ್ಟೆಲ್ ಶುಲ್ಕ ಪಾವತಿಸದ ಬಗ್ಗೆ ಆಡಳಿತ ಮಂಡಳಿ ಆತನ ಕುಟುಂಬಕ್ಕೆ ಮಾಹಿತಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು ಮಹಿಳೆಯೊಬ್ಬರು ತನ್ನ 14 ವರ್ಷದ ಮಗಳನ್ನು ಉದ್ಯಮಿಯೊಬ್ಬರಿಗೆ ಮಾರಾಟ ಮಾಡಿದ್ದಾಳೆ.

ಮಗನನ್ನು ಖಾಸಗಿ ಶಾಲೆಯ ಹಾಸ್ಟೆಲ್‌ನಲ್ಲಿ ಬಿಟ್ಟು ತನ್ನ ಪ್ರಿಯಕರನೊಂದಿಗೆ ಓಡಿಹೋಗಿದ್ದಾಳೆ.

ಹಾಸ್ಟೆಲ್ ಶುಲ್ಕವನ್ನು ಪಾವತಿಸದಿರುವ ಬಗ್ಗೆ ಅವರ ಮಗನ ಹಾಸ್ಟೆಲ್ ಆಡಳಿತವು ಕುಟುಂಬಕ್ಕೆ ತಿಳಿಸಿದಾಗ ಘಟನೆ ಮುನ್ನೆಲೆಗೆ ಬಂದಿದೆ.

ಹಾಸ್ಟೆಲ್ ಆಡಳಿತದ ಮಾಹಿತಿಯ ನಂತರ ಮಗುವಿನ ಅಜ್ಜ ಜಾರ್ಖಂಡ್‌ನ ರಾಂಚಿಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ಅದನ್ನು ಮುಜಾಫರ್‌ಪುರಕ್ಕೆ ವರ್ಗಾಯಿಸಲಾಯಿತು.

ಮಹಿಳೆ ತನ್ನ ಪತಿಯೊಂದಿಗೆ ಕೆಲಸಕ್ಕಾಗಿ ಮುಜಾಫರ್‌ಪುರಕ್ಕೆ ತೆರಳಿದ್ದಳು.

ಮುಜಾಫರ್‌ಪುರದ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಗೋಬರ್‌ಸಾಹಿ ಪ್ರದೇಶದಲ್ಲಿ ದಂಪತಿ ವಾಸಿಸುತ್ತಿದ್ದರು.

2021 ರಲ್ಲಿ ಮಹಿಳೆಯ ಪತಿ ನಿಧನರಾದರು. ನಂತರ ಆಕೆಗೆ ಸ್ಥಳೀಯ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಯಿತು. ಇಬ್ಬರೂ ಮದುವೆಯಾಗಲು ನಿರ್ಧರಿಸಿದರು.

ಆ ವ್ಯಕ್ತಿ ಈಕೆಯ ಮಕ್ಕಳನ್ನು ಒಪ್ಪಿಕೊಳ್ಳಲು ನಿರಾಕರಿಸಿದನು.

ನಂತರ ಮಹಿಳೆ ಮಗಳನ್ನು ಸ್ಥಳೀಯ ಉದ್ಯಮಿಯೊಬ್ಬರಿಗೆ ಮಾರಾಟ ಮಾಡಿದ್ದಾಳೆ. ತನ್ನ ಮಗನನ್ನು ಖಾಸಗಿ ಶಾಲೆಯ ಹಾಸ್ಟೆಲ್‌ನಲ್ಲಿ ಬಿಟ್ಟಿದ್ದಾಳೆ.

ಘಟನೆಯ ಕುರಿತು ಮಾತನಾಡಿದ ಮುಝಾಫರ್‌ಪುರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅವದೇಶ್ ದೀಕ್ಷಿತ್, ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲು ಮಾಡಲಾಗಿದ್ದು ನಂತರ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿ, ಹುಡುಗಿಯನ್ನು ರಕ್ಷಿಸಿ ಮಗುವನ್ನು ಖರೀದಿಸಿದ ಉದ್ಯಮಿ ಮತ್ತು ಡೀಲ್ ಮಾಡಿದ ಮಧ್ಯಮ ಮಹಿಳೆಯನ್ನೂ ಬಂಧಿಸಲಾಗಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *