Connect with us

    BANTWAL

    ಬಂಟ್ವಾಳ : ಯುವತಿ ಸ್ನಾನ ಮಾಡುವಾಗ ವಿಡಿಯೋ ಚಿತ್ರೀಕರಣ – ಆರೋಪಿ ಪೊಲೀಸ್ ವಶಕ್ಕೆ..!

    ಯುವತಿಯೋರ್ವಳು ಸ್ನಾನ ಮಾಡುತ್ತಿರುವ ವಿಡಿಯೋ ವ್ಯಕ್ತಿಯೋರ್ವ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿದ ಪ್ರಕರಣ ಬಂಟ್ವಾಳದಲ್ಲಿ ವರದಿಯಾಗಿದ್ದು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಬಂಟ್ವಾಳ: ಯುವತಿಯೋರ್ವಳು ಸ್ನಾನ ಮಾಡುತ್ತಿರುವ ವಿಡಿಯೋ ವ್ಯಕ್ತಿಯೋರ್ವ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿದ ಪ್ರಕರಣ ಬಂಟ್ವಾಳದಲ್ಲಿ ವರದಿಯಾಗಿದ್ದು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

    ಜಕ್ರಿಬೆಟ್ಟು ಎಂಬಲ್ಲಿನ‌ ಮನೆಯಲ್ಲಿ ಯುವತಿಯೋರ್ವಳು ಸ್ನಾನ ಮಾಡುತ್ತಿರುವ ವೇಳೆ ವ್ಯಕ್ತಿಯೋರ್ವ ಗೋಡೆಯ ಸೆರೆಯ ಮಧ್ಯೆ ಮೊಬೈಲ್ ನಲ್ಲಿ  ಚಿತ್ರಿಕರಣ ಮಾಡುತ್ತಿರುವುದು ಗಮನಕ್ಕೆ ಬಂದಿದೆ.

    ಇದನ್ನು ಕಂಡ ಯುವತಿ ಜೋರಾಗಿ ಬೊಬ್ಬೆ ಹಾಕಿದ್ದಾಳೆ, ಈ ಸಂದರ್ಭ ಅಪರಿಚಿತ ಆರೋಪಿ ಓಡಿಹೋಗಿದ್ದಾನೆ.

    ಬಳಿಕ ಈ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ವಿಡಿಯೋ ಚಿತ್ರೀಕರಣ ಮಾಡಿದ ಅಗ್ರಾರ್ ನಿವಾಸಿಯನ್ನು ಪೋಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply