ಇದ್ಯಾಕಪ್ಪ ಹೀಗೆ ಬಾಳೆಗೊನೆ ಚೆನ್ನಾಗಿ ಬಂದಿತ್ತು. ಮಾರಾಟಕ್ಕೆ ಪೇಟೆಗೆ ಹೊರಟೆ.ಮಕ್ಕಳಿಗೆ ಬೇರೆ ಬೇರೆ ಊರಲ್ಲಿ ಕೆಲಸ .ಕೃಷಿ ನನ್ನ ಕೆಲಸ. ಬೆಲೆ ಹೇಗಿದೆಯೋ ಗೊತ್ತಿಲ್ಲ. ಚೆನ್ನಾಗಿ ಸಿಗಬಹುದೆಂಬ ನಂಬಿಕೆಯಿಂದ ತಲುಪಿದ್ದೆ. ಬೆಲೆ ಬೆಳೆಸಿದ ಖರ್ಚಿಗಿಂತ ಹೆಚ್ಚು...
ಬದಲಾಗಬೇಕಾಗಿದೆ? ಯಾರಿಗೋ ಹಿಂಸೆ ಮಾಡಿ ನಾವು ಸಂತಸ ಅನುಭವಿಸುವುದೇತಕ್ಕೆ?. ಕಾಡಲಾರಂಭಿಸಿತು. ಕ್ರೌರ್ಯ ಮನದೊಳಗೆ ಸುಳಿದಾಡಿ ಒಮ್ಮೆ ತಲ್ಲಣಿಸಿತುಜೀವ. ನಿಜ ಅಲ್ವಾ? ಪ್ರಾಣಿಗಳನ್ನು ಕೊಂದು ಹಿಂಸಿಸಿ ನಾವು ಸೇವಿಸುತ್ತಿರುವುದು ತಪ್ಪಲ್ಲವೇ ? ನಮ್ಮ ದೈನಂದಿನ ಬದುಕು ಮಾಂಸ...
ಫಲವೇನು? ಸರಕಾರದ ಹೊಸ ಕಡತಕ್ಕೆ ಕರಡುಪ್ರತಿ ತಯಾರಾಗುತ್ತಿತ್ತು. ಕೆಲವೇ ಗಂಟೆಗಳಲ್ಲಿ ಅನುಮೋದನೆಯಾಗಿ ಅಧಿಕೃತ ಮುದ್ರೆಯೂ ಬಿತ್ತು. ಕರತಾಡನಗಳ ಸುರಿಮಳೆ, ಜೊತೆಗೆ ಪತ್ರಿಕಾಪ್ರಕಟಣೆ, ಸುದ್ದಿಗೋಷ್ಠಿ, ಶಂಕುಸ್ಥಾಪನೆಯೂ ಜರುಗಿ ಬಿಟ್ಟಿತ್ತು. ಕಲ್ಯಾಣಪುರದ ಊರಿನಲ್ಲಿ ಕೆಲವು ನೂರು ಕೋಟಿಗಳನ್ನು ಖರ್ಚು...
ಅಂದರೆ ಗಣೇಶ್ ಅಣ್ಣನ ಕಣ್ಣು ಅರಳಿದ್ದವು. ಅಗಲ ಹಣೆಯಲ್ಲಿ ಬೆವರಿನ ಸಾಲುಗಳು ಚುಕ್ಕಿ ರಂಗೋಲಿ ಬಿಡಿಸಿದ್ದವು. ಕಥೆಯ ಸರಣಿ ಆರಂಭವಾಗಿತ್ತು ಅದು ಕಟ್ಟುಕಥೆಯಲ್ಲ. ಅನುಭವಿಸಿದ ನಿಜದ ಅರಿವು ಮಾತಿನಲ್ಲಿ ಕಾಣುತ್ತಿತ್ತು. “ಆ ದಿನ ಅಕ್ಕ ಬಸ್ಸಿನಿಂದ...
ತಲುಪದ ಸಂದೇಶ ಇವರು ನಮ್ಮವರಲ್ಲ ? ಅಂದರೆ ಈ ಊರಿನವರಲ್ಲ ಅಂತ ಅವರ ಭಾಷೆ ಮತ್ತು ಚಟುವಟಿಕೆಯಿಂದ ನನಗರ್ಥವಾಯಿತು. ಬಿಸಿಲ ನಾಡಿನಲ್ಲಿ ಸುಟ್ಟವರೆಂದು ಅವರ ಚರ್ಮ ತಿಳಿಸುತ್ತಿದೆ. ಸೂರ್ಯ ಕೆಲಸ ಮುಗಿಸಿ ಕೈ ಕಾಲು ತೊಳೆಯುವ...
ತುಂಡು ಕಾಗದ ಮಳೆಯೊಂದು ಹನಿಗಳ ಹೊತ್ತು ಮರ,ಗಿಡ ,ಹುಲ್ಲು, ಬಳ್ಳಿ ,ಮನೆಗಳ ಮೇಲೆ ಸುರಿದು ಮಣ್ಣ ಮುತ್ತಿಕ್ಕುವ ಗಳಿಗೆ ಸನ್ನಿಹಿತವಾಗುವ ಸೂಚನೆ ನೀಡಲು ಡಂಗುರದವ ಕಪ್ಪು ಮೋಡಗಳೊಂದಿಗೆ ಬಂದು ಅಲ್ಲಲ್ಲಿ ಚಿತ್ತಾಕರ್ಷಕ ರೇಖೆ ಮೂಡಿಸಿ ಚಿತ್ತಾರ...
ಮೈದಾನ ನೀವು ದೊಡ್ಡೋರು ನಿಮ್ಮ ಮಾತಿಗೆ ಪೊಲೀಸ್ ಸ್ಟೇಷನ್, ಕೋರ್ಟುಗಳು ಸಹಕಾರ ನೀಡುತ್ತದೆ .ನಾನು ಯಾರ ಬಳಿ ಹೇಳಲಿ. ನನ್ನ ಆಡೋ ಮೈದಾನ ಮಾಯವಾಗಿದೆ. ಮಳೆಗಾಲವಾದರೆ ಕೆಸರಿನೊಂದಿಗೆ ,ಬಿಸಿಲಾದರೆ ಬಿಸಿಯೊಂದಿಗೆ ಆಟವಾಡುತ್ತಿದ್ದೆ ನಮ್ಮ ಖುಷಿಯ ಬಗ್ಗೆ...
ಬರಿದಾಗದ ಬದುಕು ಚೇಳ್ಯಾರಿನ ಆ ಏರು ಹತ್ತಿದರೆ ಅಲ್ಲೇ ಬಲ ಬದಿಗಿನ ಎರಡನೇ ಮನೆ ನಮ್ಮ ಗೋಪಿ ಅಜ್ಜಿದು. ಬೆನ್ನು ಬಾಗಿದರೂ ನೆರಿಗೆಗಳಿಗೆ ವಯಸ್ಸಾದರೂ ತುಟಿಯ ನಗು ಮಾಸಿಲ್ಲ. ಎಂಥವರಿಗೂ ಒಮ್ಮೆ ಮುದ್ದಿಸಬೇಕೆನ್ನುವ ಅಜ್ಜಿಯ ಪ್ರಸನ್ನತೆ....
ನೆರಳು ಕಾಣೆಯಾಗಿದೆ ಎಷ್ಟು ಅರಸಿದರೂ ಸಿಗುತ್ತಿಲ್ಲ. ನನ್ನ ತೊರೆದು ಚಲಿಸಿದವನನ್ನ ಕರೆದು ಕೇಳೋಣವೆಂದರೆ ಎಲ್ಲಿ ಅಂತ ಹುಡುಕುವುದು .ನಿಮಗೆ ಹೇಗೆ ಹೇಳುವುದು ? “ನನ್ನ ನೆರಳು ಕಾಣೆಯಾಗಿದೆ ” ನಿಜ ಸಾರ್ ನನ್ನ ಮಾತು! ನಿಮಗೆ...
ಯಾರಿವನು ಆತ ನಮ್ಮಂತೆ ಇಲ್ಲ. ವಸ್ತ್ರ ವಿಕಾರ ,ಜಡ್ಡುಗಟ್ಟಿದ ಕೇಶರಾಶಿ ಕಂಡು ಜನ “ಹುಚ್ಚಾ” ಅಂತಿದ್ದಾರೆ. ತೊಟ್ಟಿಲಲ್ಲಿ ಜೋಗುಳ ಹಾಡುತ್ತಾ ಅವನಮ್ಮ ಕೂಗಿದ ಹೆಸರ ನೆನಪಿಲ್ಲ .ಈಗ ಕರಿಯೋ ಹುಚ್ಚನೆಂಬ ನಾಮದೇಯಕ್ಕೆ ಬೇಸರವೂ ಇಲ್ಲ ....