ಕತೆ-ವ್ಯಥೆ ನಿಮ್ಮಲ್ಲಿ ಸಮಯವಿದ್ದರೆ ನನ್ನ ಕಥೆಯನ್ನು ಒಮ್ಮೆ ಕೇಳಿ. ಇದು ನನ್ನ ಜೀವನ ಕಥೆ .”ಗಾಳಿಯನ್ನ ಸೀಳುತ್ತಾ ಮುನ್ನುಗ್ಗುತ್ತಿದೆ ನಾನು.ಆಗಸದಲ್ಲಿ ಮೋಡಗಳ ಮೇಲೆ ಹಾರುತ್ತಾ ದಿಗಂತದಂಚಿನಲ್ಲಿ ಕಣ್ಣಾಡಿಸುತ್ತಿದ್ದೆ. ನನ್ನ ಬಾಲ್ಯದ ಕತೆ ನಿಮಗೆ ಬೇಡ ಯಾಕೆಂದ್ರೆ...
ಕತ್ತಲಿನ ಕತೆ ‘ಕತ್ತಲು’ ಯಾವಾಗಲೂ ರಾತ್ರಿಯಾಗುವುದನ್ನೇ ಕಾಯುತ್ತಿತ್ತು. ಬೆಳಗ್ಗಿನ ಜಂಜಾಟವನ್ನು ಕಳೆಯಬೇಕೆನ್ನುವ ದಾವಂತ ದಿನವೂ ಹುಟ್ಟುತ್ತಿತ್ತು. ಇತ್ತೀಚಿಗೆ ವಿಪರೀತ ಅನ್ನುವಷ್ಟರಮಟ್ಟಿಗೆ ಹೆಚ್ಚಾಗಿತ್ತು. ರಾತ್ರಿಗೆ ಕಾಯೋದು ,ಒಮ್ಮೆ ನಿಡಿದಾಗಿ ಉಸಿರು ಬಿಟ್ಟು ಅದನ್ನು ಆಸ್ವಾದಿಸುತ್ತಾ ಬೆಳಗಿನ ಬೆಳಕಿಗೆ...
ತಪ್ಪಲ್ಲವೇ? ಅಲ್ಲಿ ಮೇಲೆ ನಿಂತ ಚೈತನ್ಯ ಶಕ್ತಿ ಎನಂದುಕೊಳ್ಳುತ್ತಿದ್ದೀಯೋ ಗೊತ್ತಿಲ್ಲ. ಖಂಡಿತ ನೋವಾಗಿರುತ್ತೆ. ತಲೆಮೇಲೆ ಹೊತ್ತು ಮೆರೆಸಿದರು ಅರಿವಿನಿಂದಲೋ ಅಥವಾ ಗೊತ್ತಿಲ್ಲದೆಯೋ ಕಾಲಕಸ ಮಾಡಿರುವುದು ನೋವು ತರಿಸಿರುವುದು ಖಂಡಿತ .ಇಷ್ಟೆಲ್ಲ ಪೀಠಿಕೆ ಯಾಕೆಂದರೆ ನಾ ಬರುವ...
ಪ್ರಶ್ನೆ? ಪುಟ್ಟ ಪಾದದಲ್ಲಿ ಕಿರುಗೆಜ್ಜೆ ಧರಿಸಿ ಮನೆಯಲ್ಲಿ ಓಡಾಡುವವಳೇ ನನ್ನ ಮುದ್ದಿನ ತಂಗಿ ಭಕ್ತಿ. ಹೆಸರಿಗೆ ಅನ್ವರ್ಥದ ಹಾಗೆಯೇ ಎಲ್ಲದರಲ್ಲೂ ಭಕ್ತಿ ತುಸು ಹೆಚ್ಚೇ ಇದೆ. ಮುದ್ದಿನ ಕಣ್ಣೋಟ,ತೊದಲು ಮಾತಿನಿಂದ ಮನಸೆಳೆಯುವ ದೇವತೆ ಅವಳು. ಕೂಡು...
ನಂಬೋದ್ಯಾರನ್ನಾ ಇಲ್ಲಿ ತಪ್ಪು ಯಾರದ್ದು ಅನ್ನೋದು ಗೊತ್ತಿಲ್ಲ .ನನ್ನೊಳಗಿನ ‘ನಾನು’ ಅನ್ನುವವನು ಎಲ್ಲರನ್ನು ಒಂದೇ ತೆರದಿ ನೋಡುತ್ತಿದ್ದ. ಹಾಗೆ ವರ್ತಿಸುತ್ತಿದ್ದ. ಮನೆಯ ಜಗಲಿಯಲ್ಲಿ ದಿನವೂ ಮಲಗುವ ಜಿಮ್ಮಿಯನ್ನು, ಅಂಗಳದ ಹೂಗಿಡಗಳನ್ನು ,ಮಾರ್ಗ ಬದಿಯ ಮರವನ್ನು, ಹಂಚಿನ...
ಭಾವನೆ “ಮಾತು ಎಲ್ಲಿಂದ ಬಂದರು ಒಪ್ಪುವುದಾದರೆ ಪಡೆದುಕೋ” ಅಂತ ಸದಾಶಿವ ಸರ್ ಆಗಾಗ ಹೇಳ್ತಾಯಿದ್ರು ಹಾಗಾಗಿಯೇ ನಾನು ಅವನ ಮಾತನ್ನ ಕೇಳಿದ್ದು. ನನಗಿಂತ ಸಣ್ಣವ, ಹಾಗಂತ ನಾನೇನು ಎರಡು ಮಕ್ಕಳ ತಂದೆಯಲ್ಲ .ಅವನು ನನ್ನ ವಯಸ್ಸಿಗಿಂತ...
ಅಜ್ಜಿ ಬಿಸಿಲಿನ ಝಳವನ್ನು ತಡಿಯೋಕ್ಕಾಗದೆ ಸೂರ್ಯ ಮೋಡವನ್ನು ಕರೆದು ಮರೆಮಾಡಿ ನೆರಳಿಗೆ ಬಂದು ನಿಂತ. ಅದಕ್ಕೆ ಕಾಯುತ್ತಿದ್ದರೋ ಅಥವಾ ಸಮಯವಾಯಿತೋ ಗೊತ್ತಿಲ್ಲ ಕತ್ತಿಹಿಡಿದು ಹುಲ್ಲು ತರೋಕೆ ತೋಟದ ಕಡೆಗೆ ನಡೆದರು ನನ್ನ ಲಕ್ಷ್ಮಿ ಅಜ್ಜಿ. ಅವರ...
ಪೊಟೋಗ್ರಾಪರ್ ಅಕ್ಷತೆಗಳು ನೆಲದ ಮೇಲೆ ಬಿದ್ದಿವೆ. ಸಂಭ್ರಮದ ಮಾತುಗಳು ಸುತ್ತಲೆಲ್ಲ ತುಂಬಿದೆ. ಶುಭಾಶಯಗಳ ವಿನಿಮಯ ,ಗಟ್ಟಿಮೇಳದ ನಾದನ, ಜೀವನದ ಅದ್ಭುತ ಕ್ಷಣವನ್ನ ಕಣ್ತುಂಬಿಕೊಳ್ಳುತ್ತಿದ್ದಾರೆ ಎಲ್ಲಾ.ಹಲವು ವರ್ಷವಾದ ಮೇಲೆ ಮತ್ತೊಮ್ಮೆ ಈ ಸಂಭ್ರಮವನ್ನು ನೆನಪಿಸಿಕೊಳ್ಳಬೇಕೆಂಬ ಕಾರಣಕ್ಕೆ ಅವನನ್ನು...
ಕತೆಯಾದವ ಅವನೇನು ನನಗೆ ಅತಿ ಅಪರಿಚಿತನಲ್ಲ .ಎಲ್ಲೋ ನೋಡಿದ ಹಾಗೆ ಕಾಣಿಸುವ ಮುಖ ಅವನದ್ದು. ನಾ ಕತೆ ಬರೆಯಲು ಆರಂಭಿಸಿದ ದಿನದಂದು ಅದನ್ನು ಓದುತ್ತಿದ್ದನಂತೆ. ಹಾಗಾಗಿ ಸಿಕ್ಕಿದಾಗಲೆಲ್ಲಾ, ವೈಯಕ್ತಿಕ ಭೇಟಿಯಲ್ಲಿ, ಆಥವಾ ಸಂದೇಶದಲ್ಲಿ “ನಂದೂ ಒಂದು...
“ಮಾನವ?” ನಮ್ಮೂರಿನ ಗುಡ್ಡದಿಂದ ಇಳಿದು ಬರುವ ಸಣ್ಣ ತೊರೆಯು ಗದ್ದೆ ತೋಟಗಳನ್ನು ಹಾದು, ರೋಡು ಬೆಟ್ಟವನ್ನು ಹತ್ತಿ ಇಳಿದು, ಧುಮುಕಿ, ನದಿಯಾಗಿ ಸಾಗರವನ್ನು ಸೇರುತ್ತದೆ. ನಮ್ಮೂರಿನ ಗುಡ್ಡದಲ್ಲಿ ಹುಟ್ಟುವ ನೀರನ್ನ ಮಾತನಾಡಿಸುವ ಆಸೆಯಿಂದ ಸಮುದ್ರದ ಬಳಿ...