Connect with us

    LATEST NEWS

    ದಿನಕ್ಕೊಂದು ಕಥೆ- ಭಾವನೆ

    ಭಾವನೆ

    “ಮಾತು ಎಲ್ಲಿಂದ ಬಂದರು ಒಪ್ಪುವುದಾದರೆ ಪಡೆದುಕೋ” ಅಂತ ಸದಾಶಿವ ಸರ್ ಆಗಾಗ ಹೇಳ್ತಾಯಿದ್ರು ಹಾಗಾಗಿಯೇ ನಾನು ಅವನ ಮಾತನ್ನ ಕೇಳಿದ್ದು. ನನಗಿಂತ ಸಣ್ಣವ, ಹಾಗಂತ ನಾನೇನು ಎರಡು ಮಕ್ಕಳ ತಂದೆಯಲ್ಲ .ಅವನು ನನ್ನ ವಯಸ್ಸಿಗಿಂತ 4 ವರ್ಷ ಸಣ್ಣವನು. ಅವನ ಮಾತು ಅನುಭವದಿಂದಲೋ, ಓದಿದ್ದೋ ಗೊತ್ತಿಲ್ಲ.

    ಅವನ ಸುಲಲಿತ ಮಾತಿನಲ್ಲಿ ಅದಕ್ಕೊಂದು ರೂಪ ಕೊಟ್ಟು ನುಡಿಸಿದ್ದಾನೆ .”ಅಣ್ಣಾ ಈ ಸಂಬಂಧಗಳ ಬಗ್ಗೆ ನಾವೇನು ಅಂದುಕೊಳ್ಳುತ್ತೇವೋ ಅದು ಹಾಗೆ ಇರಲೇಬೇಕು ಅಂತೇನು ಇಲ್ಲವಲ್ಲ. ಹುಡುಗ-ಹುಡುಗಿ ಜೊತೆಗಿದ್ದ ಕೂಡಲೇ ಪ್ರೇಮಿಗಳು ಅಂತಾಗಲಿ, ವಿಪರೀತ ಬೆರೀತಾಳೆ ಅನ್ನೋದಕ್ಕೆ’——-‘ ಹೆಗಲ ಮೇಲೆ ಕೈಹಾಕಿ ನಗುವ ಕಾರಣಕ್ಕೆ ಸ್ನೇಹಿತರು ,ಹಿರಿಯರನ್ನು ಕಂಡಾಗ ಭಕ್ತಿಯಿಂದ ಕೈಮುಗಿಯೀದನ್ನ ನೋಡಿದಾಗ ಗುರು-ಶಿಷ್ಯ ಅನ್ನೋದನ್ನೆಲ್ಲ ನಿರ್ಧರಿಸಲಾಗುವುದಿಲ್ಲ.

    ಇಲ್ಲಿ ಆ ಕ್ಷಣಕ್ಕೆ ಹಾಗೆ ಕಂಡರೂ ಅವರಿಂದ ಉತ್ತರ ಸಿಗದೆ ನಾವೇ ನಿರ್ಧರಿಸುವುದು ತಪ್ಪಲ್ಲವಾ. ಇನ್ನೊಂದು ಮಜಾ ವಿಷಯ ಅಂದರೆ ಜೊತೆಗಿರುವ ಇಬ್ಬರೂ ತಮ್ಮೊಳಗಿನ ಸಂಬಂಧಗಳಿಗೆ ಒಂದು ಹೆಸರನ್ನು ಇಟ್ಟುಕೊಂಡಿರುತ್ತಾರೆ. ಪರಸ್ಪರ ಮಾತನಾಡದೆ ಅವರ ಸಾಹಚರ್ಯದಿಂದ ಇದು ಹೇಗಿರಬಹುದೆಂಬ ಊಹೆಯಿಂದ ಬದುಕುತ್ತಿರುತ್ತಾರೆ.

    ನಾನು ಅವರನ್ನು ಹಾಗೆ ಅಂದುಕೊಳ್ಳುವ ಕಾರಣಕ್ಕೆ ಅವರು ಕೂಡ ನನ್ನನ್ನು ಅದೇ ಭಾವನೆಯಿಂದ ನೋಡಬೇಕೆಂಬ ಷರತ್ತೂ ಏನೂ ಇಲ್ಲವಲ್ಲ. ಬಾಯಿಯಲ್ಲಿ ಉಚ್ಚರಿಸುವ ಭಾವನೆಗೂ ಮನಸ್ಸಿನ ಆಲೋಚನೆಗೂ ತುಂಬಾ ವ್ಯತ್ಯಾಸ ಇರಬಹುದಲ್ವಾ. ಸುಮ್ಮನೆ ಪ್ರಶ್ನಾರ್ಥಕ ಚಿಹ್ನೆಗಳನ್ನ ಕಿತ್ತೆಸೆದು ಬದುಕಿದರೆ ಬದುಕಲ್ಲಿ ಬದುಕಬಹುದು” . ಭಾವನೆ ನನ್ನದು ಮಾತ್ರ ಬೇರೆಯವರದಲ್ಲ ಮನೆಯಲ್ಲಿ ಅಮ್ಮ ಒಬ್ಬಳೇ ಕಾಯುತ್ತಿರುತ್ತಾಳೆ. ಓಡಿದ ದೊಡ್ಡ ಮನಸ್ಸಿನ ಸಣ್ಣ ಹುಡುಗ …..

    ಧೀರಜ್ ಬೆಳ್ಳಾರೆ

    Share Information
    Advertisement
    Click to comment

    You must be logged in to post a comment Login

    Leave a Reply