Connect with us

MANGALORE

ಸರ್ಫರ್ ತನ್ವಿ ಜಗದೀಶ್ ಅಂತರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ

ಸರ್ಫರ್ ತನ್ವಿ ಜಗದೀಶ್ ಅಂತರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ

ಮಂಗಳೂರು ಸೆಪ್ಟೆಂಬರ್ 19: ದೇಶದ ಖ್ಯಾತ ಸರ್ಫರ್ ಹಾಗೂ ಸ್ಟ್ಯಾಂಡ್ ಅಪ್ ಪೆಡ್ಲರ್ ಮಂಗಳೂರಿನ ತನ್ವಿ ಜಗದೀಶ್ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೊ ಸರ್ಫ್ ಕನೆಕ್ಟ್ ಸಂಘಟನೆ ಕ್ರೀಡಾ ಸಾಧಕರಿಗೆ ನೀಡುವ ಗ್ರೋಮ್ ಆಫ್ ದಿ ಇಯರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಂಗಳೂರು ಹೊರವಲಯದ ಸಸಿ ಹಿತ್ಲು ನಿವಾಸಿ ತನ್ವಿ ಜಗದೀಶ್ ಮುಂದಿನ ತಿಂಗಳು ಅಮೆರಿಕಕ್ಕೆ ತೆರಳಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

Facebook Comments

comments