Connect with us

DAKSHINA KANNADA

ಸುಳ್ಯ: ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ.ಜಿ ವಿರುದ್ಧ ದೈವದ ಮೊರೆ ಹೋದ ಕಾಂಗ್ರೆಸ್ ಮುಖಂಡರು

Share Information

ಸುಳ್ಯ, ಜುಲೈ 04: ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ.ಜಿ ವಿರುದ್ಧ ಕಾಂಗ್ರೆಸ್ ಮುಖಂಡರು ದೈವದ ಮೊರೆ ಹೋದ ಘಟನೆ ನಡೆದಿದೆ.

ಮತದಾನ ಸಮಯದಲ್ಲಿ ತಾವು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆನ್ನುವ ಆರೋಪಿಸಿದ್ದಾರೆ ಎಂದು ಕೋಡಿಂಬಾಳದ ಪ್ರಸಿದ್ಧ ಮಜ್ಜಾರು ಕ್ಷೇತ್ರಕ್ಕೆ ಕಾಂಗ್ರೆಸ್ ಮುಖಂಡರು ಆಗಮಿಸಿ ಹರಕೆ ಹೇಳಿದ್ದಾರೆ. ಬಾಲಕೃಷ್ಣ ಬಳ್ಳೇರಿ, ಸುಧೀರ್ ದೇವಾಡಿಗ, ಶ್ರೀಮತಿ ಉಷಾ ಆಂಚನ್, ಆಶಾ ಲಕ್ಷ್ಮಣ್ ಎಂಬವರು ದೈವದ ಮೊರೆ ಹೋದವರು.

ಕೋಡಿಂಬಾಳದ ಪ್ರಸಿದ್ಧ ಮಜ್ಜಾರು ರಾಜನ್ ದೈವದ ಸನ್ನಿಧಿಯಲ್ಲಿ ಹರಕೆ ಹೇಳಿದ್ದು, ತಮ್ಮನ್ನು ಪಕ್ಷದಿಂದ ಪಕ್ಷ ವಿರೋಧಿ ನೆಪ ಹೇಳಿ ಉಚ್ಛಾಟನೆ ಮಾಡಲಾಗಿದೆ. ನಾವು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ, ಕೃಷ್ಣಪ್ಪ ಅವರ ಕುಮ್ಮಕ್ಕಿನಿಂದ ತಮ್ಮನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.

ಕೃಷ್ಣಪ್ಪ ಅವರು ದೈವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ, ಕೃಷ್ಣಪ್ಪ ಅವರೇ ಪಕ್ಷವನ್ನು ಸೋಲಿಸಿ ನಮ್ಮ ಮೇಲೆ ಆಪಾದನೆ ಮಾಡುತ್ತಿದ್ದಾರೆ. ನಾವು ಇನ್ನೋರ್ವ ಅಭ್ಯರ್ಥಿ ನಂದಕುಮಾರ್ ಅವರನ್ನು ಬೆಂಬಲಿಸದಿರಲು ಅವರೇನು ಕಾಂಗ್ರೆಸ್ ಪಕ್ಷದ ವ್ಯಕ್ತಿಯಲ್ಲವೇ ಅವರನ್ನು ಬೆಂಬಲಿಸಿದ್ದೇವೆ ಎನ್ನುವ ಕಾರಣದಿಂದ ನಮ್ಮನ್ನು ಪಕ್ಷ ವಿರೋಧಿಗಳು ಎಂದು ಹೇಳಲಾಗುತ್ತಿದೆ. ಕಡಬ ತಾಲೂಕಿನಲ್ಲಿ ಕಾಂಗ್ರೆಸ್ ಬಲಪಡಿಸಲು ನಾವು ಸತತವಾಗಿ ದುಡಿದಿದ್ದೇವೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಮುಖಂಡರು ದೈವದ ಮುಂದೆ ಕಣ್ಣೀರಿಟ್ಟಿದ್ದಾರೆ.


Share Information
Advertisement
Click to comment

You must be logged in to post a comment Login

Leave a Reply