Connect with us

    LATEST NEWS

    ಬೆಳಗಿನ ವಾಕಿಂಗ್ ಹೊರಟಿದ್ದ ಮಹಿಳೆಯರ ಮೇಲೆ ಹರಿದ ಕಾರು – ತಾಯಿ ಮಗಳ ಸಾವು…!!

    ಹೈದರಬಾದ್ ಜುಲೈ 04: ಬೆಳಕಿನ ವಾಕಿಂಗ್ ಹೊರಟಿದ್ದ ಮಹಿಳೆಯರ ಮೇಲೆ ಕಾರೊಂದು ಹರಿದ ಪರಿಣಾಮ ತಾಯಿ ಮಗಳು ಸಾವನಪ್ಪಿದ ಘಟನೆ ಹೈದರಾಬಾದ್‌ನ ಬಂಡ್ಲಗುಡದಲ್ಲಿ ನಡೆದಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ.

    ನಗರದ ಹೊರವಲಯದ ಬಂಡ್ಲಗುಡದಲ್ಲಿ ಬೆಳಗಿನ ವಾಕಿಂಗ್ ಹೋಗುತ್ತಿದ್ದ ನಾಲ್ವರು ಮಹಿಳೆಯರ ಮೇಲೆ ಕಾರು ಹರಿದಿದೆ. ಬಂಡ್ಲಗೂಡ ಜಾಗೀರ್ ಸೂರ್ಯಸಿಟಿಯಲ್ಲಿ ಘಟನೆ ನಡೆದಿದೆ. ಈ ಅಪಘಾತದಲ್ಲಿ ತಾಯಿ ಮತ್ತು ಮಗಳು ಅನುರಾಧ ಮತ್ತು ಮಮತಾ ಸಾವನ್ನಪ್ಪಿದ್ದು, ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ.

    ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಅಪಘಾತದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿವೆ.

     

    Share Information
    Advertisement
    Click to comment

    You must be logged in to post a comment Login

    Leave a Reply