ಸುಳ್ಯ,ಜುಲೈ27: ಸುಳ್ಯ ನಗರದಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದ್ದು, ಈತನನ್ನು ದುಷ್ಕರ್ಮಿಗಳು ಕೊಲೆ ನಡೆಸಿ ಪರಾರಿಯಾಗಿರುವ ಸಂಶಯ ವ್ಯಕ್ತವಾಗಿದೆ. ಸುಳ್ಯದ ಪ್ರಕಾಶ್ ಟ್ರೇಟರ್ಸ್ ಎನ್ನುವ ಅಂಗಡಿ ಮುಂಭಾಗದಲ್ಲಿ ವ್ಯಕ್ತಿಯ ಶವ ಬಿದ್ದಿದ್ದು, ತಲೆಗೆ ಬಲವಾದ ಆಯುಧದಿಂದ ಹೊಡೆದ ಪರಿಣಾಮ ಸಾವಿಗೀಡಾದ ಸಾಧ್ಯತೆಯಿದೆ. ಹಕ್ಕಿಪಿಕ್ಕಿ ಜನಾಂಗಕ್ಕೆ ಸೇರಿದ ವ್ಯಕ್ತಿ ಎನ್ನುವ ಮಾಹಿತಿ ತಿಳಿದುಬಂದಿದ್ದು, ಸುಳ್ಯ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Facebook Comments

comments