ಮಂಗಳೂರು,ಜುಲೈ27:ಮರಳು ಸಾಗಾಟದ ಲಾರಿಯೊಂದು ಸೇತುವೆಗೆ ಡಿಕ್ಕಿ ಹೊಡೆದ ಘಟನೆ ಇಂದು ಮುಂಜಾನೆ ನಡೆದಿದ್ದು, ಲಾರಿ ಡಿಕ್ಕಿ ಹೊಡೆದ ಪರಿಣಾಮ ಸೇತುವೆಯ ತಡೆಗೋಡೆಗೆ ಹಾನಿಯಾಗಿದೆ.

ಮಂಗಳೂರು-ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯ ನೇತ್ರಾವತಿ ನದಿಗೆ ಮುಗೇರು ಎಂಬಲ್ಲಿ  ನಿರ್ಮಿಸಲಾಗಿರುವ ಸೇತುವೆಯಲ್ಲಿ  ಈ ಅವಘಡ ನಡೆದಿದ್ದು, ಉಳ್ಳಾಲ ಪೋಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಲಾರಿ ಡಿಕ್ಕಿಯಾದ ಪರಿಣಾಮ ಸೇತುವೆಗೆ ನಿರ್ಮಿಸಲಾಗಿರುವ ತಡೆಗೋಡೆ ಭಾಗಶ ಕುಸಿದಿದ್ದು, ಘಟನೆಯ ಬಳಿಕ ಸೇತುವೆಯಲ್ಲಿ ವಾಹನ ದಟ್ಟಣೆಯೂ ಕಂಡು ಬಂತು. ಸ್ಥಳದಲ್ಲಿದ್ದ ಪೋಲೀಸರು ವಾಹನ ದಟ್ಟಣೆಯನ್ನು ನಿರ್ವಹಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು