Connect with us

    LATEST NEWS

    ಮಂಗಳೂರು – ಸೆಮಿಸ್ಟರ್ ಪರೀಕ್ಷೆ ಮುಗಿಸಿ ನಾಪತ್ತೆಯಾದ ಕಾಲೇಜು ವಿಧ್ಯಾರ್ಥಿನಿ ದೀಪಿಕಾ ಪೊನ್ನುರಾಜ್

    ಮಂಗಳೂರು ಮೇ 08: ಎಂಎಸ್ಸಿ ಓದುತ್ತಿರುವ ವಿಧ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ನಾಪತ್ತೆಯಾದ ವಿಧ್ಯಾರ್ಥಿನಿಯನ್ನು ನಗರದ ವೆಲೆನ್ಸಿಯಾದ ರೋಶನಿ ನಿಲಯದ ವಿದ್ಯಾರ್ಥಿನಿ ಎಲಿಜಬೆತ್ ದೀಪಿಕಾ ಪೊನ್ನುರಾಜ್ (21). ಈಕೆ ಮೇ 7ರಿಂದ ನಾಪತ್ತೆಯಾಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


    ರೋಶನಿ ನಿಲಯದಲ್ಲಿ ಕ್ರಿಮಿನಾಲಜಿ ಆ್ಯಂಡ್ ಫಾರೆನ್ಸಿಕ್ ಸೈನ್ಸ್ ವಿಷಯದಲ್ಲಿ ಎಂಎಸ್ಸಿ ಮೊದಲನೆ ವರ್ಷದಲ್ಲಿ ಕಲಿಯುತ್ತಿದ್ದು, ಮೇ 7ರಂದು ರೋಶನಿ ನಿಲಯದಲ್ಲಿ 2ನೆ ಸೆಮಿಸ್ಟರ್ ಪರೀಕ್ಷೆ ಮುಗಿಸಿ ಹೊರಗೆ ಬಂದಿದ್ದ ವಿಧ್ಯಾರ್ಥಿನಿ ಬಳಿಕ ವಾಪಸ್ ಪರೀಕ್ಷಾ ಹಾಲ್‌ಗೆ ಬಾರದೆ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

    ಕಾಲೇಜಿನ ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ಕಾಲೇಜಿನಿಂದ ಹೊರಗೆ ಹೋಗಿರುವುದು ಕಂಡು ಬಂದಿದೆ. 5.6 ಅಡಿ ಎತ್ತರದ, ಗೋದಿ ಮೈಬಣ್ಣದ, ದುಂಡು ಮುಖದ, ದಪ್ಪ ಶರೀರದ ಈಕೆ ನಾಪತ್ತೆಯಾದಾಗ ಕಾಲೇಜಿನ ಸಮವಸ್ತ್ರ ಧರಿಸಿ ದ್ದರು. ಕನ್ನಡ, ತಮಿಳು, ಹಿಂದಿ, ಇಂಗ್ಲಿಷ್ ಭಾಷೆ ಬಲ್ಲ ಈಕೆಯನ್ನು ಕಂಡವರು 0824-2220800/ 2220518/ 9480805339/ 9480805346ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply