Connect with us

  LATEST NEWS

  ಮಾಜಿ ಶಾಸಕ ರಘುಪತಿ ಭಟ್ ಆರೋಪಿಗಳಿಗೆ ತಿರುಗೇಟು ನೀಡಿದ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ

  ಮಂಗಳೂರು ಮೇ 19 :ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿದಲ್ಲಿ ಬಿಜೆಪಿ ವಿರುದ್ದ ಬಂಡಾಯವಾಗಿ ಚುನಾವಣೆಗೆ ನಿಂತಿರುವ ಬಿಜೆಪಿ ಮುಖಂಡ ಮಾಜಿ ಶಾಸಕ ರಘುಪತಿ ಭಟ್ ಮಾಡಿರುವ ಆರೋಪಿಗಳಿಗೆ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ತಿರುಗೇಟು ನೀಡಿದ್ದಾರೆ.


  ಮಂಗಳೂರಿನಲ್ಲಿ ಮಾತನಾಡಿದ ಅವರು ನಾನು ಹತ್ತನೇ ವಯಸ್ಸಿನಿಂದಲೇ ರಾಷ್ಟ್ರೀಯ ಸ್ವಯಂ ಸೇವಕ, ಬಸವೇಶ್ವರ ಶಾಖೆಯಲ್ಲಿ ಸ್ವಯಂ ಸೇವಕನಾಗಿ ಸೇರಿದ್ದು, ಸಂಘದ ಐಟಿಸಿ, ಓಟಿಸಿ ಆದವ, ಮೂವತ್ತು ವರ್ಷಗಳ ಹಿಂದೆ ಪುತ್ತೂರಿನಲ್ಲಿ ಓಟಿಸಿ ಆದವ, ಅಲ್ಲದೆ ಮುಖ್ಯ ಶಿಕ್ಷಕನಾಗಿ ನಾನು ಸಂಘದಲ್ಲಿ ಇದ್ದವನು, ಸಂಘದ ಜವಾಬ್ದಾರಿ ಇತ್ತು, ನಾನು ಹಲವು ವರ್ಷಗಳ ಹಿಂದಿನಿಂದಲೂ ಸಂಘದ ಕಾರ್ಯಕರ್ತ, ಸಂಘಟನೆಯ ವಿಕಾಸ ಟ್ರಸ್ಟ್ ಅಧ್ಯಕ್ಷನಾಗಿ ಕೆಲಸ ಮಾಡ್ತಿದ್ದೆ ಎಂದರು.
  ಶಿವಮೊಗ್ಗದ ಹರ್ಷಾ ಮತ್ತು ಕುಟುಂಬ ನನಗೆ ಆಪ್ತರು, ಆವತ್ತು‌ ನಾವು ನಡೆಸಿದ ಶಾಂತಿಯ ನಡಿಗೆ ಎಲ್ಲರನ್ನೂ ಸೇರಿಸಿ, ಎಲ್ಲಾ ಸಂಘ ಸಂಸ್ಥೆ, ಸಂತರನ್ನ ಸೇರಿಸಿ ಮೆರವಣಿಗೆ ಮಾಡಿದ್ದೇವೆ. ನಾನು ಬಿಜೆಪಿಗೆ ಜ್ಯೂನಿಯರ್ ಆಗಿದ್ದರೂ ಸಂಘದಲ್ಲಿ 36 ವರ್ಷದಿಂದ ಇದ್ದೇನೆ ಎಂದರು.

  ಹತ್ತು ವರ್ಷದಿಂದ ಎಲ್ಲಾ ಪೂರ್ಣಾವಧಿ ಕಾರ್ಯಕರ್ತರಿಗೆ ನಮ್ಮ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಇದೆ. ಸಂಘದ ಪೂರ್ಣಾವಧಿ ಕಾರ್ಯಕರ್ತರು ಹಾಗೂ ಬೇರೆ ಕಾರ್ಯಕರ್ತರ ಸಂಪರ್ಕ ಇದೆ. ನಾನು ಸಂಘ ಮತ್ತು ಪಕ್ಷಕ್ಕಾಗಿ ಹಗಲಿರುಳು ದುಡಿಯುತ್ತೇನೆ. ನನ್ನಲ್ಲಿ ಇರೋದು ಸಂಘಟನೆ ಶಕ್ತಿ, ಆರೋಪಗಳು ಬರುತ್ತದೆ ಹೋಗ್ತದೆ ಎಂದರು.

  Share Information
  Advertisement
  Click to comment

  You must be logged in to post a comment Login

  Leave a Reply