Connect with us

    LATEST NEWS

    ಮುಂದಿನ ದಿನಗಳಲ್ಲಿ ನಮ್ಮಂತಹ ಸಣ್ಣ ಜಾತಿಗೆ ರಾಜಕೀಯ ಮಾಡೋದು ಬಹಳ ಕಷ್ಟವಿದೆ – ರಘುಪತಿ ಭಟ್

    ಮಂಗಳೂರು ಮೇ 18: ನಾವು ಏನು ಮಾಡಿದ್ರು ಇಲ್ಲಿನ ಕಾರ್ಯಕರ್ತರು ಮತ ಹಾಕುತ್ತಾರೆ ಅನ್ನೋ ಭಾವನೆ ನಮ್ಮ ರಾಜ್ಯ ನಾಯಕರಿಗೆ ಬಂದಿದ್ದು, ಹಿಂದುತ್ವದ ಆಧಾರದಲ್ಲಿ ಏನೇ ಮಾಡಿದ್ರು ಇಲ್ಲಿ ನಡೆಯುತ್ತೆ ಅನ್ನೋ ಭಾವನೆಯಿದೆ ಒಂದು ರೀತಿ ಟೇಕನ್ ಫಾರ್ ಗ್ರಾಂಟೆಡ್ ಎನ್ನುವ ರೀತಿ ಇದೆ ಎಂದು ಮಾಜಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕರಾವಳಿಯ ಮತದಾರರು ಅವಕಾಶ ನೀಡುತ್ತಾರೆಂಬ ವಿಶ್ವಾಸ ಇದೆ ಈ ಹಿನ್ನಲೆ ವಿಧಾನ ಪರಿಷತ್ತಿನ ಪದವೀಧರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿದ್ದೇನೆ ಎಂದು ರಘುಪತಿ ಭಟ್ ಹೇಳಿದ್ದಾರೆ.


    ಪಕ್ಷದಲ್ಲಿ ಸೀನಿಯಾರಿಟಿ ಮೇಲೆ ಯಾರಿಗೇ ಆದರೂ ಅವಕಾಶ ನೀಡುತ್ತಿದ್ದರೆ ನನಗೆ ಬೇಜಾರು ಆಗುತ್ತಿರಲಿಲ್ಲ. ಆದರೆ ಹಣ, ಜಾತಿಗೆ ಮಣೆ ಹಾಕಿದ್ದಾರೆ. ಕರಾವಳಿ ಜನರನ್ನು ಕಡೆಗಣಿಸಿದ್ದಾರೆ, ನನ್ನದು ಸಣ್ಣ ಜಾತಿ. ಮೂರು ಬಾರಿ ಶಾಸಕನಾಗಿ ಕ್ಷೇತ್ರದಲ್ಲಿ ಯಾರು ನಿಂತರೂ ಗೆಲ್ಲುವಷ್ಟು ಪಕ್ಷವನ್ನು ಬೆಳೆಸಿದ್ದೇನೆ. ವಿಧಾನಸಭೆ ಚುನಾವಣೆಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಮೀನುಗಾರ ಸಮುದಾಯಕ್ಕೆ ಅವಕಾಶ ನೀಡಬೇಕೆಂದು ನನ್ನ ಕ್ಷೇತ್ರದಲ್ಲಿ ಯಶಪಾಲ್ ಸುವರ್ಣಗೆ ಅವಕಾಶ ನೀಡಿದರು, ರಾಜ್ಯದ 224 ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಕಲೆಗೆ ಹೆಚ್ಚು ಪ್ರೋತ್ಸಾಹ ನೀಡಿದ ಕ್ಷೇತ್ರ ಉಡುಪಿ ಕ್ಷೇತ್ರ ನಾನು ಶಾಸಕನಾಗಿದ್ದಾಗ ಈ ಕೆಲಸಗಳಿಗೆ ಒತ್ತು ನೀಡಿದ್ದೇನೆ. 2023 ವಿಧಾನ ಸಭಾ ಚುನಾವಣೆಗೆ ನಾನೇ ಅಭ್ಯರ್ಥಿ ಎಂದು ಎಲ್ಲಾ ತಯಾರಿ ಮಾಡಿದ್ದೆ ಆದರೆ ನನಗೆ ಟಿಕೆಟ್ ನಿರಾಕರಿಸಲಾಯಿತು. ನಾನು ಪಕ್ಷ ನಿಷ್ಠೆ ಮರಿಯಲಿಲ್ಲ ಟಿಕೆಟ್ ನೀಡದೆ ನನ್ನನ್ನ ನಡೆಸಿಕೊಂಡ ರೀತಿ ನನಗೆ ಬೇಸರ ತರಿಸಿತ್ತು. ಆದರೂ ನಮ್ಮ ಅಭ್ಯರ್ಥಿಯನ್ನ ಗೆಲಿಸಲು ಶ್ರಮ ವಹಿಸಿದ್ದೆ, ಅ ನಂತರವೂ ನಾನು ಬಿಜೆಪಿ ಪಕ್ಷದಲ್ಲಿದ್ದೆ.

    ನೈರುತ್ಯ ಪಧವೀಧರರ ಕ್ಷೇತ್ರದ ಸ್ಥಾನ ತೆರವಾದಾಗ , ನನ್ನ ಪಕ್ಷದ ಹಿರಿಯರಲ್ಲಿ ಅವಕಾಶ ನೀಡಬೇಕು ಎಂದಿದ್ದೆ . ನನ್ನನ್ನ ರಾಜಕೀಯವಾಗಿ ಮುಗಿಸಲೇ ಬೇಕು ಎಂದ್ರೆ ನನಗೆ ಪಧವೀಧರರ ಕೊಡಬೇಡಿ ಎಂದಿದ್ದೆ. ಆದರೆ ಅವರು ನೀವೇ ಸೂಕ್ತ, ಈ ಬಾರಿ ನಿಮಗೆ ಅನ್ಯಾಯವಗಲ್ಲ ಅಂದಿದ್ರು, ಆದರೆ ಬೈ ಎಲೆಕ್ಷನ್ ನಡೆಯಲಿಲ್ಲ . ಆ ಬಳಿಕ ಪರಿಷತ್ ಚುನಾವಣೆಯಲ್ಲಿ ಕರಾವಳಿಗೆ ಭಾಗಕ್ಕೆ ಶಿಕ್ಷಕರ ಕ್ಷೇತ್ರ, ಮಲೆನಾಡಿಗೆ ಪಧವೀಧರ ಕ್ಷೇತ್ರ ನೀಡುತ್ತೇವೆ ಅಂದಿದ್ರು ಈ ವೇಳೆ ನಿಮಗೆ ಅವಕಾಶ ನೀಡುತ್ತೇವೆ,ಕೆಲಸ ಶುರು ಮಾಡಿ ಎಂದಿದ್ದರು, ನನ್ನನ್ನ ಶಿವಮೊಗ್ಗ ಲೋಕಸಭಾ ಚುನಾವಣೆಯ ಪ್ರಭಾರಿ ಮಾಡಿದ್ದರು, ಲೋಕಸಭೆ ಚುನಾವಣೆ ವೇಳೆ ಪಕ್ಷಕ್ಕಾಗಿ ಹಗಲಿರುಳು ದುಡಿದಿದ್ದೇನೆ.

    ಒಂದೂವರೆ ವರ್ಷದ ಹಿಂದೆ ಧನಂಜಯ ಸರ್ಜಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈಗೆಲ್ಲ ಜಾತಿ ಮೇಲೆ ಚುನಾವಣೆ ನಡೆಯುತ್ತಿದೆ . ಮುಂದಿನ ದಿನಗಳಲ್ಲಿ ನಮ್ಮಂತಹ ಸಣ್ಣ ಜಾತಿಗೆ ರಾಜಕೀಯ ಮಾಡೋದು ಬಹಳ ಕಷ್ಟವಿದೆ . ನನ್ನ ನೈತಿಕತೆಯಿಂದ ನಾನು ಪಕ್ಷದ ವಿರುದ್ಧ ಹೋಗಿದ್ದೇನೆ ಎಂದು ನನಗೆ ಅನಿಸಲ್ಲ , ನಾನು ಗೆದ್ರೂ ಬಿಜೆಪಿ, ಗೆದ್ದ ಮೇಲೂ ನಾನು ಬಿಜೆಪಿ ಕಚೇರಿಗೆ ಹೋಗುತ್ತೇನೆ. ಸೋತರೂ ನನ್ನನ್ನು ಉಚ್ಚಾಟನೆ ಮಾಡಿದ್ರೂ,ನಾನು ಬಿಜೆಪಿ ಕಾರ್ಯಕರ್ತನ್ನಾಗಿ ಕೆಲಸ ಮಾಡುತ್ತೇನೆ ಎಂದರು. ನಮ್ಮ ಪಕ್ಷದಲ್ಲಿ ಮುಂಚೆ ಬೂತ್ ಮಟ್ಟದಲ್ಲಿ ಹೆಸರು ಚರ್ಚೆಯಾಗಿ ಹೋಗುತ್ತಿತ್ತು, ಆದರೆ ಈಗ ಗಾಡ್ ಫಾದರ್ ಸಂಸ್ಕೃತಿ ಬಿಜೆಪಿ ಗೆ ಬಂದಿದೆ. ಕಾಂಗ್ರೆಸ್ ನ ಗಾಡ್ ಫಾದರ್ ಸಂಸ್ಕೃತಿ ಬಿಜೆಪಿಗೂ ಬಂದಿದೆ. ನಾನು ಲೀಡರ್ ಗಳನ್ನ ಹಿಡಿದುಕೊಂಡಿರಲಿಲ್ಲ, ನಾನು ಕಾರ್ಯಕರ್ತರನ್ನ ಹಿಡಿದುಕೊಂಡಿದ್ದೇನೆ. ನನ್ನ ಜಾತಕ ಸರಿ ಇಲ್ವಾ,? ಆ ಕಾರಣದಿಂದ ನನಗೆ ಟಿಕೆಟ್ ಸಿಗ್ತಾ ಇಲ್ವಾ ಗೊತ್ತಿಲ್ಲ, ಈಶ್ವರಪ್ಪ ನವರ ಕಥೆ ಬೇರೆ ನನ್ನ ಕಥೆ ಬೇರೆ, ಪಕ್ಷದಿಂದ ಉಚ್ಚಾಟನೆ ಮಾಡಿದ್ರೆ ನನಗೆ ಬೇಸರವಗುತ್ತೆ. ಆದರೆ ಕಾರ್ಯಕರ್ತರ ಪರವಾಗಿ ಧ್ವನಿ ಎತ್ತುವವರು ಬೇಕಾಗಿದೆ, ಗೆಲ್ಲಲಿ ಸೋಲಲಿ ನಾನು ಇಟ್ಟ ಹೆಜ್ಜೆ ಹಿಂದೆ ಇಡೋದಿಲ್ಲ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply