LATEST NEWS
ಸ್ಪೈಸ್ ಜೆಟ್ ವಿಮಾನ ಅವಾಂತರ : ರನ್ ವೇಯ ದೀಪಗಳು ಜಖಂ
ಸ್ಪೈಸ್ ಜೆಟ್ ವಿಮಾನ ಅವಾಂತರ : ರನ್ ವೇಯ ದೀಪಗಳು ಜಖಂ
ಬೆಂಗಳೂರಿನ ಅಮತರಾಷ್ಟ್ರೀಯ ವಿಮಾನನ ನಿಲ್ದಾಣದಲ್ಲಿ ಘಟನೆ; ಪ್ರಯಾಣಿಕರು ಸುರಕ್ಷಿತ
ಬೆಂಗಳೂರು,ಮಾರ್ಚ್ 17: ಸ್ಪೈಸ್ ಜೆಟ್ ವಿಮಾನ ರನ್ ವೇ ಯಲ್ಲಿ ಇಳಿದ ಬಳಿಕ ಬದಿಯಲ್ಲಿ ವಿದ್ಯುದೀಪಗಳನ್ನು ಹಾಳು ಮಾಡಿದ ಘಟನೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.ಇದರಿಂದ ಅರ್ಧ ಗಂಟೆಗೂ ಹೆಚ್ಚು ಕಾಲ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಯಿತು.
ಬೆಂಗಳೂರಿನ ಅಂತರಾಷ್ಟ್ರೀಯ ಕೆಂಪೆಗೌಡ ವಿಮಾನ ನಿಲ್ದಾಣಕ್ಕೆ ಹೈದಾರಾಬಾದ್ ನಿಂದ ಆಗಮಿಸಿದ ಸ್ಪೈಸ್ ಜೆಟ್ ವಿಮಾನದಿಂದ ಈ ದುರ್ಘಟನೆ ಸಂಭವಿಸಿದೆ.
ಇದರಿಂದ ಕೆಲವು ದೀಪಗಳು ಹಾಳಾದ್ದರಿಂದ ಕೆಲ ಕಾಲ ವಿಮಾನ ಸಂಚಾರ ಸ್ಥಗಿತಗೊಂಡಿತು.
ರಾತ್ರಿ 10.47ರಿಂದ 11.28ರವರೆಗೆ ಕನಿಷ್ಠ 10 ವಿಮಾನಗಳ ಸಂಚಾರವನ್ನು ಬದಲಾಯಿಸಲಾಯಿತು ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನಕ್ಕೆ ಯಾವುದೇ ಹಾನಿಯಾಗಿಲ್ಲ, ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.
ರನ್ ವೇಯನ್ನು ಮುಚ್ಚುವ ಹೊತ್ತಿಗೆ 8 ವಿಮಾನಗಳನ್ನು ಚೆನ್ನೈಗೆ ಬದಲಾಯಿಸಲಾಯಿತು ಮತ್ತು ಇನ್ನೆರಡು ವಿಮಾನಗಳನ್ನು ತಿರುಚ್ಚಿ ಮತ್ತು ಕೊಯಮತ್ತೂರಿಗೆ ಕಳುಹಿಸಲಾಯಿತು ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.
You must be logged in to post a comment Login