Connect with us

    LATEST NEWS

    ಬಾನಿನಲ್ಲಿ ತೆರೆದ ವಿಮಾನದ ಬಾಗಿಲು : ಉದುರಿದವು ಕೋಟಿ ಮೌಲ್ಯದ ಚಿನ್ನ-ವಜ್ರಾಭರಣಗಳು

    ಬಾನಿನಲ್ಲಿ ತೆರೆದ ವಿಮಾನದ ಬಾಗಿಲು : ಉದುರಿದವು ಕೋಟಿ ಮೌಲ್ಯದ ಚಿನ್ನ-ವಜ್ರಾಭರಣಗಳು

    ಮಾಸ್ಕೋ, ಮಾರ್ಚ್ 17 : ರಶ್ಯದ ಯಾಕುತ್‌ಸ್ಕ್ ವಿಮಾನ ನಿಲ್ದಾಣದಿಂದ ಸರಕು ಸಾಗಣೆ ವಿಮಾನವೊಂದು ಟೇಕಾಫ್ ಆದ ಸ್ವಲ್ಪ ಹೊತ್ತಿನಲ್ಲೆ ಆಕಸ್ಮಿಕವಾಗಿ ವಿಮಾನದ ಬಾಗಿಲು ತೆರೆದುಕೊಂಡ ಪರಿಣಾಮ ಅದರಲ್ಲಿದ್ದ 10 ಟನ್‌ ಚಿನ್ನ, ಪ್ಲಾಟಿನಂ ಮತ್ತು ವಜ್ರಗಳು ಅಸುಪಾಸಿನ ಭೂಮಿಯಲ್ಲಿ ಉದುರಿದ ಘಟನೆ ವರದಿಯಾಗಿದೆ.

    26 ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ ಚೆಲ್ಲಾಪಿಲ್ಲಿಯಾಗಿ ಉದುರಿ ಹರಡಿಕೊಂಡು ಬಿದ್ದಿದೆ. ಇವುಗಳ ಮೌಲ್ಯ 2,6369 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.

    ನಿಂಬಸ್‌ ಏರ್‌ ಲೈನ್ಸ್‌ ಎಎನ್‌ -12 ಸರಕು ಸಾಗಣೆ ವಿಮಾನ ಟೇಕಾಫ್ ಆದ ಸ್ವಲ್ಪ ಹೊತ್ತಿನಲ್ಲೇ ಅದರಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಪರಿಣಾಮವಾಗಿ ಅದರ ಬಾಗಿಲು ತೆರೆದುಕೊಂಡಿದೆ.

    ವಿಮಾನದೊಳಗಿದ್ದ 10 ಟನ್‌ ಚಿನ್ನ, ಪ್ಲಾಟಿನಂ, ವಜ್ರದ ಸರಕುಗಳು ಆಗಸದಿಂದ ಉದುರಿದೆ.

    ಆಗಸದಿಂದ ಉದುರುತ್ತಿದ್ದ ಚಿನ್ನ, ವಜ್ರಗಳ ಸುರಿ ಮಳೆ ಆಗುತ್ತಿರುವಂತೆ ತೋರಿಬಂತು ಎಂದು ಸ್ಥಳೀಯರು ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

    ಈ ಘಟನೆ ಸಂಭವಿಸಿದ ಕೂಡಲೇ ರನ್‌ವೇಯನ್ನು ಮುಚ್ಚಲಾಯಿತು.

    ಪೊಲೀಸರು ಮತ್ತು ರಹಸ್ಯ ಸೇವಾ ದಳದ ಸಿಬಂದಿಗಳು ವ್ಯಾಪಕ ಶೋಧ ಕಾರ್ಯಾಚರಣೆಯಲ್ಲಿ ತೊಡಗಿಕೊಂಡರು. ಈ ವಿಮಾನದಲ್ಲಿ ವಜ್ರ, ಚಿನ್ನ, ಪ್ಲಾಟಿನಂ ತುಂಬಿದ್ದ ಸರಕು ಚುಕೋತಾ ಮೈನಿಂಗ್‌ ಆ್ಯಂಡ್‌ ಜಿಯೋಲಾಜಿಕಲ್‌ ಕಂಪೆನಿಗೆ ಸೇರಿದ್ದಾಗಿದೆ.

    ಈ ವಿಮಾನದ ಹಾರಾಟವನ್ನು ಸಜ್ಜುಗೊಳಿಸಿದ ತಾಂತ್ರಿಕ ಇಂಜಿನಿಯರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply