Connect with us

    FILM

    ಯೂಟ್ಯೂಬರ್ ಗೌರವ್ ತನೇಜಾ ಡೈವೋರ್ಸ್ ಗಾಸಿಫ್.. ವ್ಲಾಗ್ ನಲ್ಲಿ ಆದರ್ಶ ದಂಪತಿ ನಿಜ ಜೀವನೇ ಬೆರೆ ಎಂದ ನೆಟ್ಟಿಗರು…!!

    ದೆಹಲಿ ಸೆಪ್ಟೆಂಬರ್ 29: ಪ್ಲೈಯಿಂಗ್ ಬೀಸ್ಟ್ ಖ್ಯಾತಿಯ ಯೂಟ್ಯೂಬರ್ ಗೌರವ್ ತನೇಜಾ ಹಾಗೂ ರಿತು ರಥಿ ಅವರ ವೈವಾಹಿಕ ಜೀವನದಲ್ಲಿ ಇದೀಗ ಬಿರುಗಾಳಿ ಎದ್ದಿದ್ದು, ಇಬ್ಬರು ಡೈವೋರ್ಸ್ ಪಡೆಯುವ ಹಂತಕ್ಕೆ ತಲುಪಿದ್ದಾರೆ ಎಂಬ ವರದಿಯಾಗಿದೆ.


    ಪ್ಲೈಯಿಂಗ್ ಬೀಸ್ಟ್ ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಮನೆ ಮಾತಾಗಿರುವ ಗೌರವ್ ತನೇಜಾ ತನ್ನ ಪತ್ನಿ ಪೈಲೆಟ್ ರಿತುರಾಥಿ ಜೊತೆ ಡೈವೋರ್ಸ್ ಪಡೆಯಲಿದ್ದಾರೆ ಎಂಬ ವದಂತಿ ಹಬ್ಬಿದೆ. ಯೂಟ್ಯೂಬ್ ನಲ್ಲಿ ಸದಾ ಜೊತೆಯಾಗಿ ಆದರ್ಶ ದಂಪತಿಗಳಂತೆ ಇದ್ದ ಇಬ್ಬರು ಇದೀಗ ಡೈವೋರ್ಸ್ ಹಂತಕ್ಕೆ ತಲುಪಿದ್ದಾರೆ. ದಂಪತಿಗಳು 2016 ರಲ್ಲಿ ವಿವಾಹವಾದರು ಮತ್ತು ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಸ್ವಾಮಿಜಿ ಒಬ್ಬರ ಕಾರ್ಯಕ್ರಮದಲ್ಲಿ ರಿತುರಾಥಿ ಅವರು ಭಾಗವಹಿಸಿದ್ದಾರೆ ಎನ್ನಲಾದ ವಿಡಿಯೋ ಒಂದು ವೈರಲ್ ಆಗಿತ್ತು, ಅದರಲ್ಲಿ ಆಕೆ ತನ್ನ ವೈವಾಹಿಕ ಜೀವನದಲ್ಲಿ ತನ್ನ ಗಂಡ ಮಾಡಿರುವ ದ್ರೋಹಗಳ ಬಗ್ಗೆ ಸ್ವಾಮಿಜಿಗೆ ಹೇಳಿದ್ದಾರೆ. ಇದು ರಿತುರಾಥಿ ಅವರೇ ಎಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು.


    ಇದೀಗ ಗೌರವ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವೈವಾಹಿಕ ಜೀವನದ ಸುತ್ತಲಿನ ಊಹಾಪೋಹಗಳಿಗೆ ಪೂರ್ಣ ವಿರಾಮ ಹಾಕುವಂತೆ ಒಂದು ಪೋಸ್ಟ್ ಮಾಡಿದ್ದಾರೆ. “ದಯವಿಟ್ಟು ಯಾವುದೇ ಊಹೆಗಳನ್ನು ಮಾಡುವುದನ್ನು ನಿಲ್ಲಿಸಿ” ಎಂದು ಬರೆದಿದ್ದಾರೆ. “ನನ್ನ ಮಕ್ಕಳು ಮತ್ತು ನನ್ನ ಮಗುವಿನ ತಾಯಿಗಾಗಿ ನಾನು ಮೌನವಾಗಿರುತ್ತೇನೆ. ನನ್ನ ಇಡೀ ಜೀವನದಲ್ಲಿ ಎಲ್ಲಾ ನಕಾರಾತ್ಮಕತೆ ಮತ್ತು ದ್ವೇಷದೊಂದಿಗೆ ಬದುಕಲು ಸಿದ್ಧವಾಗಿದೆ. ದಯವಿಟ್ಟು ಯಾವುದೇ ಸಾರ್ವಜನಿಕ ವಿವರಣೆಯನ್ನು ನಿರೀಕ್ಷಿಸಬೇಡಿ.”

    “ಪುರುಷರನ್ನು ಅತ್ಯಂತ ವೇಗವಾಗಿ ವಿಲನ್‌ಗಳನ್ನಾಗಿ ಮಾಡಲಾಗಿದೆ, ನಾವು ಅಳುವುದಿಲ್ಲ, ನಾವು ಕಡಿಮೆ ಮಾತನಾಡುತ್ತೇವೆ ಮತ್ತು ಕಡಿಮೆ ವ್ಯಕ್ತಪಡಿಸುತ್ತೇವೆ. ನಮ್ಮಲ್ಲಿ ಕೆಲವರು ಈ ರೀತಿ ಕಠಿಣವಾಗಿರುತ್ತಾರೆ. ಸಾಮಾಜಿಕ ಮಾಧ್ಯಮವು ಕೌಟುಂಬಿಕ ವಿಷಯಗಳನ್ನು ಚರ್ಚಿಸುವ ಸ್ಥಳವಲ್ಲ. ನಾನು ಹೇಳಲು ಏನೂ ಇಲ್ಲ. ಎಲ್ಲವೂ ಆಗುತ್ತದೆ ಎಂದು ಆಶಿಸುತ್ತೇನೆ. ಶೀಘ್ರದಲ್ಲೇ ವಿಂಗಡಿಸಲಾಗಿದೆ,” ಗೌರವ್ ಹಂಚಿಕೊಂಡಿದ್ದಾರೆ.
    ಅವರು ತಮ್ಮ ಪೋಸ್ಟ್ ಅನ್ನು ಮುಕ್ತಾಯಗೊಳಿಸಿದರು, “ಮೇರೆ ಪೂರ್ವಾ ಜನಮ್ ಕೆ ಔರ್ ಈಸ್ ಜನಮ್ ಕೆ ಬಹುತ್ ಪಾಪ ಏಕತ್ರಿತ್ ಹೋಂಗೆ. ಯೇ ಭಗವಾನ್ ಕಿ ಕೃಪಾ ಹೈ ಹೈ, ಕಿ ಐಸಿ ಜನಮ್ ಮೇ, ವೋ ಮೇರೆ ಸಾರೇ ಪ್ರಾರಬ್ಧ್ ನಷ್ಟ್ ಕರ್ ರಹೇ ಹೈ.” ಎಂದಿದ್ದಾರೆ. ಒಟ್ಟಾರೆ ಯೂಟ್ಯೂಬ್ ಬ್ಲಾಗ್ ಗಳಲ್ಲಿ ತಾವು ಪ್ರಪಂಚದ ಅತ್ಯುತ್ತಮ ಜೋಡಿ ಆದರ್ಶ ದಂಪತಿ ಎಂದು ವಿಡಿಯೋ ಮಾಡಿ ವೀವ್ಸ್ ಗಳಿಸುವವರ ಹಣೆ ಬರಹ ಇದೀಗ ಬಯಲಾಗುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply