Connect with us

KARNATAKA

ಆದಾಯದಲ್ಲಿ ದಾಖಲೆ ಬರೆದ ನೈರುತ್ಯ ರೈಲ್ವೆ, 4288.27 ಕೋಟಿ ರೂ ಲಾಭ..!

ಹುಬ್ಬಳ್ಳಿ : ನೈರುತ್ಯ ರೈಲ್ವೆಯ ಒಟ್ಟು ಆದಾಯ (ಹಂಚಿಕೆ) 2023 ರ ಏಪ್ರಿಲ್ ನಿಂದ ಅಕ್ಟೋಬರ್ ಅವಧಿಯಲ್ಲಿ 4288.27 ಕೋಟಿ ರೂಪಾಯಿಗಳಾಗಿದ್ದು, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 10.44% ಹೆಚ್ಚಾಗಿದೆ.

• ನೈರುತ್ಯ ರೈಲ್ವೆಯ ಮೂಲ ಪ್ರಯಾಣಿಕರ ಆದಾಯವು 2023 ರ ಏಪ್ರಿಲ್ ನಿಂದ ಅಕ್ಟೋಬರ್ ಅವಧಿಯಲ್ಲಿ 1801.68 ಕೋಟಿ ರೂಪಾಯಿಗಳಾಗಿದ್ದು, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 15.20% ಹೆಚ್ಚಾಗಿದೆ.

ನೈರುತ್ಯ ರೈಲ್ವೆ ಆದಾಯದಲ್ಲಿ ಅತ್ಯುತ್ತಮ ಬೆಳವಣಿಗೆಯನ್ನು ದಾಖಲಿಸಿದೆ. ಈ ವಲಯವು 2023 ರ ಏಪ್ರಿಲ್ ನಿಂದ ಅಕ್ಟೋಬರ್ ಅವಧಿಯಲ್ಲಿ ಶೇ. 10.44% ಹೆಚ್ಚಳದೊಂದಿಗೆ ಒಟ್ಟು 4288.27 ಕೋಟಿ ರೂ.ಗಳ ಆದಾಯವನ್ನು (ಹಂಚಿಕೆ) ಗಳಿಸಿದೆ, ಕಳೆದ ವರ್ಷದ ಇದೇ ಅವಧಿಯಲ್ಲಿ 3882.93 ಕೋಟಿ ರೂ ಸಂಗ್ರಹವಾಗಿತ್ತು.

ನೈಋತ್ಯ ರೈಲ್ವೆಯ ಮೂಲ ಪ್ರಯಾಣಿಕರ ಆದಾಯವು 2023 ರ ಏಪ್ರಿಲ್ ನಿಂದ ಅಕ್ಟೋಬರ್ ಅವಧಿಯಲ್ಲಿ 1801.68 ಕೋಟಿ ರೂ.ಗಳಾಗಿದ್ದು, ಕಳೆದ ವರ್ಷದ ಇದೇ ಅವಧಿಯ 1563.97 ಕೋಟಿ ರೂ.ಗೆ ಹೋಲಿಸಿದರೆ ಶೇ. 15.20% ಹೆಚ್ಚಳವಾಗಿದೆ.

ನೈರುತ್ಯ ರೈಲ್ವೆಯು 2023 ರ ಏಪ್ರಿಲ್ ನಿಂದ ಅಕ್ಟೋಬರ್ ಅವಧಿಯಲ್ಲಿ 27.49 ಮೆಟ್ರಿಕ್ ಟನ್ ಸರಕುಗಳನ್ನು ಲೋಡ್ ಮಾಡುವ ಮೂಲಕ ಶೇ. 11.66% ಹೆಚ್ಚಳದೊಂದಿಗೆ 2741.40 ಕೋಟಿ ರೂ.ಗಳ ಮೂಲ ಸರಕು ಆದಾಯವನ್ನು ಗಳಿಸಿದೆ, ಕಳೆದ ವರ್ಷ ಇದೇ ಅವಧಿಯಲ್ಲಿ 2455.14 ಕೋಟಿ ರೂ ಗಳಿಸಿತ್ತು.

ವಿಭಾಗಗಳ ಬ್ಯುಸಿನೆಸ್ ಡೆವಲಪ್ಮೆಂಟ್ ಯೂನಿಟ್ಸಗಳ ಅವಿರತ ಪ್ರಯತ್ನ ಸಮರ್ಪಕವಾದ ಅಸೆಟ್ಸ್ ಮ್ಯಾನೇಜ್ಮೆಂಟ್ ವ್ಯವಸ್ಥೆಯ ಮೂಲಕ ಸಮಯೋಚಿತ ವ್ಯಾಗನ ಪೂರೈಕೆ ಹಾಗೂ ಕಾರ್ಯಾಚರಣೆ ಮತ್ತು ನಿರ್ವಹಣಾ ಸಿಬ್ಬಂದಿಯ ಅಪಾರ ಪ್ರಯತ್ನದ ಫಲವಾಗಿ ಸರಕು ಸಾಗಣೆಯಲ್ಲಿ ಬೆಳವಣಿಗೆ ಗಣಿನೀಯ ಪ್ರಗತಿ ಸಾಧ್ಯವಾಗಿದೆ. ನೈಋತ್ಯ ರೈಲ್ವೆ ಮಾರ್ಗಗಳ ದ್ವಿಪಥಿಕರಣ ಹಾಗೂ ವಿದ್ಯುದ್ದೀಕರಣವು ಸರಕು ರೈಲುಗಳ ಸಾಗಣೆ ಸಮಯವನ್ನು ಕಡಿಮೆ ಮಾಡಲು, ರೈಲುಗಳ ವರ್ಧಿತ ಚಲನಶೀಲತೆ ಮತ್ತು ವಿಶ್ವಾಸಾರ್ಹತೆಗೆ ಕಾರಣವಾಗಿದೆ.

ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸಂಜೀವ್ ಕಿಶೋರ್ ಅವರು ಈ ಅನುಕರಣೀಯ ಸಾಧನೆಯಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *