DAKSHINA KANNADA
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಗೆ ಮಾತೃ ವಿಯೋಗ
ಪುತ್ತೂರು ಜುಲೈ 08: ಮಾಜಿ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಅವರ ತಾಯಿ ಸುನೀತಿ(92) ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ಅವರಿಗೆ 92 ವರ್ಷ ವಯಸ್ಸಾಗಿತ್ತು, ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪುತ್ರರಾದ ಕೃಷಿಕ ಅಶೋಕ್ ಕುಮಾರ್ ಸೊರಕೆ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮುಂಡೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ, ಪುತ್ರಿ ಶಶಿಕಲಾ ಶರತ್ ಮತ್ತು ಎಂಟು ಮೊಮ್ಮಕ್ಕಳು ಹಾಗೂ ಮೂವರು ಮರಿ ಮಕ್ಕಳನ್ನು ಅಗಲಿದ್ದಾರೆ.
ಅಂತ್ಯ ಸಂಸ್ಕಾರ ಇಂದು ಅವರ ಸ್ವಗೃಹವಾದ ಪುತ್ತೂರು ತಾಲೂಕಿನ ಸರ್ವೇ ಗ್ರಾಮದ ಸೊರಕೆ ಯಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.
You must be logged in to post a comment Login