Connect with us

FILM

ಟ್ರೋಲರ್ ಗಳ ಕಾಟಕ್ಕೆ ಕಣ್ಣೀರಿಟ್ಟ ಬಿಗ್ ಬಾಸ್ ಖ್ಯಾತಿಯ ಸೋನು ಗೌಡ

Share Information

ಬೆಂಗಳೂರು ಅಗಸ್ಟ್ 24: ಸೋಶಿಯಲ್ ಮಿಡಿಯಾ ಸ್ಟಾರ್ ಕನ್ನಡ ಬಿಗ್ ಬಾಸ್ ಓಟಿಟಿ ಸೀಸನ್ 1 ರ ಸ್ಪರ್ಧಿ ಸೋನು ಗೌಡ ಇದೀಗ ಕಣ್ಣೀರಿಟಿದ್ದಾರೆ. ತಮ್ಮ ವಿರುದ್ದ ಮಾಡುತ್ತಿರುವ ಟ್ರೋಲ್ ಗಳಿಂದಾಗಿ ನನ್ನ ಪ್ಯಾಮಿಲಿ ಕಣ್ಣೀರಿಡುತ್ತಿದ್ದುು, ಇದು ನನ್ನಿಂದ ನೋಡಲು ಆಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.


ಟ್ರೋಲರ್ ಗಳ ಕಾಟ ಯಾವ ರೀತಿ ಇದೆ ಎನ್ನುವುದಕ್ಕೆ ವಿಡಿಯೋ ಮಾಡಿ ಅಪ್ಲೋಡ್ ಮಾಡಿರುವ ಅವರು ನಿತ್ಯ ನನ್ನನ್ನು ಮನಸ್ಸಿಗೆ ಬಂದ ಹಾಗೆ ಟ್ರೋಲ್ ಮಾಡಲಾಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ನಿತ್ಯ ನನಗೆ ನೆಗೆಟಿವ್ ಕಾಮೆಂಟ್ಸ್ ಬರ್ತಿದೆ, ಅದನ್ನೆಲ್ಲ ನೋಡ್ತಿದೀನಿ. ಅತಿಯಾದ ನೆಗೆಟಿವ್ ಕಾಮೆಂಟ್ಸ್ ಯಾಕೆ ಬರ್ತಿದೆ ಅಂತ ನನಗೆ ಗೊತ್ತಿಲ್ಲ, ನಾನು ಆ ರೀತಿ ಏನು ತಪ್ಪು ಮಾಡಿದೀನಿ? ನಾನು ಎಷ್ಟು ಸ್ಟ್ರಾಂಗ್ ಆಗಿದ್ದೀನೋ ಅಷ್ಟೇ ಎಮೋಶನಲ್ ಕೂಡ ಹೌದು” ಎಂದು ಹೇಳಿದ್ದಾರೆ.


“ನನ್ನ ತಾಯಿ ಆ ಟ್ರೋಲ್ ವಿಡಿಯೋ ನೋಡಿ ಹುಷಾರು ತಪ್ಪಿದ್ದಾರೆ. ದಯವಿಟ್ಟು ನನ್ನನ್ನು ಯಾರು ಯಾರಿಗೋ ಹೋಲಿಕೆ ಮಾಡಿ ಟ್ರೋಲ್ ಮಾಡಬೇಡಿ. ನಾನು ಇಷ್ಟು ದಿನಗಳ ಕಾಲ ಎಲ್ಲ ಟ್ರೋಲ್‌ಗಳನ್ನು ಸಹಿಸಿಕೊಂಡಿದ್ದೆ, ಆದರೆ ಈಗ ಅಮ್ಮನ ಸ್ಥಿತಿ ನೋಡಿ ನನ್ನ ಕಣ್ಣಲ್ಲಿ ನೀರು ಬಂತು” ಎಂದು ಸೋನು ಗೌಡ ಹೇಳಿದ್ದಾರೆ. “ನಾನು ತಪ್ಪು ಮಾಡಿದ್ದೀನಿ, ಅದೊಂದು ವಯಸ್ಸು. ತಪ್ಪು ಆಗಿ ಹೋಗತ್ತೆ, ನನಗೆ ಈಗ ವಯಸ್ಸು 24. ತಪ್ಪು ತಿದ್ದುಕೊಳ್ಳೋಕೆ ಅವಕಾಶ ಕೊಡಬೇಕು, ಆದರೆ ಅದೇ ತಪ್ಪನ್ನು ಪದೇ ಪದೇ ಹೇಳುತ್ತಿದ್ದಾರೆ. ನನ್ನಿಂದ ಇಡೀ ಕುಟುಂಬ ನೋವು ತಿಂತಿದೆ ಅಂತ ನನಗೆ ಗೊತ್ತಾಗಿದೆ. ನನ್ನನ್ನು ಟ್ರೋಲ್ ಮಾಡಿ, ಆದರೆ ಲಿಮಿಟ್ ಇರಲಿ. ಬಹುತೇಕ ನೆಗೆಟಿವ್ ಕಾಮೆಂಟ್ಸ್‌ನ್ನು ಹುಡುಗಿಯರೇ ಮಾಡಿದ್ದಾರೆ” ಎಂದು ಹೇಳಿದ್ದಾರೆ ಸೋನು ಗೌಡ


“ಯಾರು ಯಾರಿಗೋ ಸಾವು ಬರತ್ತೆ, ನಿನಗೆ ಯಾಕೆ ಸಾವು ಬರಲ್ಲ ಅಂತ ಹೇಳುತ್ತಾರೆ. ನಾನು ಯಾರಿಗೂ ಮೋಸ ಮಾಡಿಲ್ಲ, ನನ್ನ ಲೈಫ್‌ನಿಂದ ಆದ ಒಂದು ತಪ್ಪನ್ನು ನಾನು ಇವತ್ತೂ ಪಶ್ಚಾತ್ತಾಪ ಪಡ್ತಿದೀನಿ. ನಮ್ಮ ಮನೆಯಲ್ಲಿ ದಿನಸಿ ಅಂಗಡಿ ಇದೆ, ನಿತ್ಯ ಏನು ತರಕಾರಿ ಉಳಿಯತ್ತೆ ಅದನ್ನು ನಾವು ಅನಾಥಾಶ್ರಮಕ್ಕೆ ಕೊಡುತ್ತೇವೆ. ನಾವು ಮಾಡಿರುವ ಸಹಾಯವನ್ನು ವಿಡಿಯೋ ಮಾಡಿ ಅಪ್‌ಲೋಡ್ ಮಾಡೋದು ನಮಗೆ ಇಷ್ಟ ಆಗಲ್ಲ” ಎಂದು ಹೇಳಿದ್ದಾರೆ ಸೋನು ಗೌಡ.


Share Information
Advertisement
Click to comment

You must be logged in to post a comment Login

Leave a Reply