Connect with us

    FILM

    ಧನರಾಜ್‌ ಗೆ ಪುಟ್ಟ ಮಗುವಿನ ಅಳು ಕೆಳಿಸಿದ ಬಿಗ್ ಬಾಸ್…!!

    ಬೆಂಗಳೂರು ಅಕ್ಟೋಬರ್ 16: ಬಿಗ್ ಬಾಸ್ ಸೀಸನ್ 11 ಮೂರನೇ ವಾರಕ್ಕೆ ಕಾಲಿಟ್ಟಿದೆ. ಅತೀ ಹೆಚ್ಚು ಜಗಳ ವಾದ ವಿವಾದಗಳಿಂದಲೇ ನಡೆಯುತ್ತಿರುವ ಬಿಗ್ ಬಾಸ್ ನಲ್ಲಿ ಈ ಬಾರಿ ಬಾವನಾತ್ಮಕವಾಗಿ ಕೊಂಡೊಯ್ಯಲು ಬಿಗ್ ಬಾಸ್ ಪ್ರಯತ್ನಿಸುತ್ತಿದೆ.


    ಈ ವಾರ ಬಿಗ್ ಬಾಸ್ ನ ಮನೆಯಲ್ಲಿ ಒಂದು ಪೋನ್ ಬೂತ್ ಇಡಲಾಗಿದ್ದು, ಅದಕ್ಕೆ ಕರೆಗಳು ಬರುತ್ತಾ ಇರುತ್ತೆ. ದಕ್ಷಿಣಕನ್ನಡ ಜಿಲ್ಲೆಯಿಂದ ತೆರಳಿದ್ದ ಇಬ್ಬರು ಸ್ಪರ್ಧಿಗಳಲ್ಲಿ ಧನರಾಜ್ ಸ್ವಲ್ಪ ಸೈಲೆಂಟ್ ಆಗಿದ್ದರು, ಅದಕ್ಕಾಗಿ ಈ ಬಾರಿ ನಾಮಿನೇಟ್ ಕೂಡ ಆಗಿದ್ದಾರೆ. ಅದರ ನಡುವೆ ಬಿಗ್ ಬಾಸ್ ಧನರಾಜ್ ಅವರನ್ನು ಮೋಟಿವೇಟ್ ಮಾಡಲು ಪೋನ್ ಕಾಲ್ ಒಂದು ಮಾಡಿಸಿದೆ. ಅದರಲ್ಲಿ ಧನರಾಜ್ ಅವರ ಪುಟಾಣಿ ಮಗುವಿನ ಅಳುವಿನ ಸದ್ದು ಕೇಳಿಸಿದೆ. ಈ ವೇಳೆ ಕಣ್ಣೀರಾದ ಧನರಾಜ್, ನನ್ನ ಮಗುವಿನ ಅಳು ನನಗೆ ಮೋಟಿವೇಶನ್ ಇದ್ದ ಹಾಗೆ. ಇನ್ನು ಮುಂದೆ ಯಾರು ಬೇರಳು ತೋರಿಸದ ರೀತಿಯಲ್ಲಿ ಆಟ ಆಡುತ್ತೇನೆ ಎಂದಿದ್ದಾರೆ.


    ಕಲರ್ಸ್ ಕನ್ನಡದ ಸಾಮಾಜಿಕ ಜಾಲತಾಣದಲ್ಲಿ ಪ್ರೋಮೋ ಪೋಸ್ಟ್ ಆಗಿದೆ. ಈ ನಡುವೆ ಬಿಗ್ ಬಾಸ್ ನಲ್ಲಿ ಗಲಾಟೆ ನಡೆದಿದ್ದು, ಇಬ್ಬರು ಸ್ಪರ್ಧಿಗಳನ್ನು ಹೊರಗೆ ಕಳುಹಿಸಲಾಗಿದೆ ಎಂಬ ಸುದ್ದಿಯಾಗಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply