FILM
ಡೀಪ್‌ಫೇಕ್‌ಗೆ ಮತ್ತೊಂದು ಖ್ಯಾತ ನಟಿ ಬಲಿ, ಫೊಟೊ ನೋಡಿ ದಂಗಾದ ಅಭಿಮಾನಿಗಳು..!
ಮುಂಬೈ : ನಟಿ ರಶ್ಮಿಕಾ ಮಂದಣ್ಣ ಬಳಿಕ ಇದೀಗ ಸೀತಾರಾಮ್ ಸಿನಿಮಾದ ನಟಿ ಮೃಣಾಲ್ ಠಾಕೂರ್ ಡೀಪ್ ಫೇಕ್ (deepfake) ಗೆ ಬಲಿಯಾಗಿದ್ದಾಳೆ. ಬಾತ್ ಟಬ್‌ನಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಳ್ಳುವ ಫೋಟೊಗಳು ಹರಿದಾಡುತ್ತಿದ್ದು ಇದನ್ನು ಹರಿಯಬಿಟ್ಟವರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹ ಕೇಳಿ ಬಂದಿದೆ.
ಮೃಣಾಲ್ ಠಾಕೂರ್ ಪ್ರಸ್ತುತ ಹಿಂದಿ ಮತ್ತು ತೆಲುಗು ಭಾಷೆಯ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ತಮ್ಮ ವಿಶೇಷ ಅಭಿನಯದಿಂದ ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ. ಸೀತಾರಾಮಂ ಸಿನಿಮಾದ ಮೂಲಕ ಸೌತ್ ಸಿನಿ ಪ್ರೇಕ್ಷಕರಿಗೆ ಪರಿಚಯವಾದ ಈ ಸುಂದರಿ ಸಾಲು ಸಾಲು ಸಿನಿಮಾಗಳ ಮೂಲಕ ಇನ್ನಷ್ಟು ಹತ್ತಿರವಾಗಿದ್ದಾರೆ. ಸೀತಾರಾಮಂ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಎದುರು ಸೀತೆಯ ಪಾತ್ರದಲ್ಲಿ ಮೃಣಾಲ್ ಠಾಕೂರ್ ನಟಿಸಿದ್ದರು. ಸದ್ಯ ನಟಿ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಮೃಣಾಲ್ ಠಾಕೂರ್ ಬಾತ್ ಟಬ್‌ನಲ್ಲಿ ಕುಳಿತು ಫೋಟೋಸ್ ಪೋಸ್ ನೀಡಿರುವ ಫೋಟೋಗಳು ವೈರಲ್ ಆಗಿವೆ. ವೈರಲ್ ಫೋಟೋಗಳಲ್ಲಿ ಮೃಣಾಲ್ ತುಂಬಾ ಹಾಟ್ ಆಗಿ ಕಾಣುತ್ತಿದ್ದಾರೆ. ಬಾತ್ ರೂಂನ ಟಬ್ ನಲ್ಲಿ ಬಿಕಿನಿಯಲ್ಲಿ ಕುಳಿತು ರೊಮ್ಯಾಂಟಿಕ್ ಆಗಿ ಫೋಟೋಗಳಿಗೆ ಪೋಸ್ ನೀಡಿದ್ದಾಳೆ. ಟ್ವಿಸ್ಟ್ ಏನೆಂದರೆ ಆ ಚಿತ್ರಗಳು ಮೃಣಾಲ್ ಠಾಕೂರ್ ಅವರದ್ದಲ್ಲ. ಅವು ಡಿಫೆಕ್ ತಂತ್ರಜ್ಞಾನದಿಂದ ಮಾಡಿದ ಚಿತ್ರಗಳು. ಇದರಿಂದ ಆಕೆಯ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಮತ್ತೊಂದೆಡೆ, ಈ ಡೀಪ್ ಫೇಕ್ ತಂತ್ರಜ್ಞಾನದಿಂದಾಗಿ ಅನೇಕ ಬಾಲಿವುಡ್ ನಟಿಯರು ಮತ್ತು ನಟರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಈ ಹಿಂದೆ ರಶ್ಮಿಕಾ ಮಂದಣ್ಣ ಕೂಡ ಈ ಡೀಪ್ ಫೇಕ್ ಗೆ ಬಲಿಯಾಗಿದ್ದರು. ಇದೀಗ ಈ ಬಗ್ಗೆ ಮೃಣಾಲ್ ಠಾಕೂರ್ ಅವರ ಡೀಪ್‌ಫೇಕ್ ಫೊಟೋಸ್ ಆಘಾತ ಸೃಷ್ಟಿ ಮಾಡುತ್ತಿವೆ.. ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ, ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಲ್ಲದೆ, ಇಂತಹ ಚಿತ್ರಗಳನ್ನು ಹರಿಬಿಟ್ಟವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ನೆಟ್ಟಿಗರು ಸಹ ಆಕ್ರೋಶ ಹೊರಹಾಕಿದ್ದಾರೆ..
You must be logged in to post a comment Login