FILM
ನಟಿ ಸಂಯುಕ್ತಾ ಹೊರನಾಡು ಅವರ ಗಿಣಿ ಪ್ರೇಮ ವಿಡಿಯೋ ವೈರಲ್, ನಿಜ ಜೀವನದಲ್ಲೂ ಪ್ರಾಣಿ ಪ್ರಿಯೆ ಎಂದು ತೋರಿಸಿದ ನಟಿ..!
ಕನ್ನಡದ ನಟಿ ಸಂಯುಕ್ತಾ ಹೊರನಾಡು( samyukta hornad) ಅವರು ಸಿನಿಮಾದ ಜೊತೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಸಿನಿಮಾಗಳಲ್ಲಿ ಮುದ್ದಾಗಿ ನಟಿಸುವ ಸಂಯುಕ್ತಾ ನೈಜ ಜೀವನದಲ್ಲಿ ಪ್ರಾಣಿ ಪ್ರಿಯೆ ಆಗಿದ್ದಾರೆ. ಅವರಿಗೆ ಬೆಕ್ಕು, ನಾಯಿ, ಮೊಲ ಹಾಗೂ ಸಣ್ಣ ಪ್ರಾಣಿಗಳನ್ನು ಕಂಡರೆ ಎತ್ತಿಕೊಂಡು ಮುದ್ದು ಮಾಡುತ್ತಾರೆ.
ಬೆಂಗಳೂರು : ಬಹುತೇಕ ಸಿನಿಮಾ ತಾರೆಯರು ತಾವಾಯ್ತು, ತಮ್ಮ ಸಿನಿಮಾವಾಯ್ತು ಹಾಗೂ ಬಂದ ಆದಾಯದಲ್ಲಿ ದೊಡ್ಡ ದೊಡ್ಡ ಉದ್ಯಮಗಳನ್ನು ನಿರ್ಮಿಸಿಕೊಂಡು ಭದ್ರ ಕೋಟೆಯನ್ನೇ ನಿರ್ಮಿಸಿಕೊಂಡು ಅದರೊಳಗೆ ಸೇರಿಕೊಳ್ಳುತ್ತಾರೆ.
ಆದ್ರೆ ಕನ್ನಡದ ನಟಿ ಸಂಯುಕ್ತಾ ಹೊರನಾಡು ಅವರು ಸಿನಿಮಾದ ಜೊತೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಸಿನಿಮಾಗಳಲ್ಲಿ ಮುದ್ದಾಗಿ ನಟಿಸುವ ಸಂಯುಕ್ತಾ ನೈಜ ಜೀವನದಲ್ಲಿ ಪ್ರಾಣಿ ಪ್ರಿಯೆ ಆಗಿದ್ದಾರೆ. ಅವರಿಗೆ ಬೆಕ್ಕು, ನಾಯಿ, ಮೊಲ ಹಾಗೂ ಸಣ್ಣ ಪ್ರಾಣಿಗಳನ್ನು ಕಂಡರೆ ಎತ್ತಿಕೊಂಡು ಮುದ್ದು ಮಾಡುತ್ತಾರೆ. ಕಳೆದ ತಿಂಗಳು ಬನ್ನೇರು ಘಟ್ಟದ 28 ತಿಂಗಳ ಹುಲಿ ಮರಿಯೊಂದನ್ನು ದತ್ತು ಪಡೆದುಕೊಂಡಿದ್ದರು. ಇದೀಗ ಇವರು ಟೇರಸ್ ಮೇಲೆ ನೂರಾರು ಗಿಳಿಗಳಿಗೆ ಧಾನ್ಯ ಹಾಕುವ ಮೂಲಕ ಸುದ್ದಿಯಾಗಿದ್ದಾರೆ. ಈ ಕುರಿತ ವಿಡಿಯೋ ಒಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ತನ್ನ ಮನೆಯ ಟೇರಸ್ ನ ಅಂಚಿನಲ್ಲಿ ಸಾಲಾಗಿ ಕಾಳು ಹಾಕುತ್ತಾರೆ. ಒಂದು ಕಡೆ ಕಾಳಿನಲ್ಲೇ ಸಂಯುಕ್ತ ಎಂದು ಬರೆಯುತ್ತಾರೆ. ಇವರು ಕಾಳು ಹಾಕಿದ ಬಳಿಕ ದೂರದಲ್ಲಿ ಕಾದು ಕುಳಿದ ಗಿಣಿಗಳು ಕಲರವದೊಂದಿಗೆ ಕಾಳಿಗೆ ಮುತ್ತಿಕ್ಕುತ್ತವೆ ನೂರಾರು ಗಿಣಿಗಳು ಕಾಳು ತಿನ್ನುವ ಮತ್ತು ಅದನ್ನು ನೋಡಿ ಸಂತೃಪ್ತಿ ಪಡುವ ಸಂಯುಕ್ತ ಹೊರನಾಡು ಅವರ ನೋಟ ನಿಜಕ್ಕೂ ಮನಸ್ಸಿಗೆ ನೆಮ್ಮದಿ ನೀಡುತ್ತೆ.
You must be logged in to post a comment Login