Connect with us

    FILM

    ಮಾಜಿ ಬಿಗ್ ಬಾಸ್ ಸ್ಪರ್ಧಿ ಸೋಷಿಯಲ್ ಮಿಡಿಯಾ ಸ್ಟಾರ್ ಸೋನು ಗೌಡ ಅರೆಸ್ಟ್

    ಬೆಂಗಳೂರು ಮಾರ್ಚ್ 22: ಮಾಜಿ ಬಿಗ್ ಬಾಸ್ ಸ್ಪರ್ಧಿ ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋಗಳಿಂದ ಟ್ರೆಂಡಿಂಗ್ ನಲ್ಲಿರುತ್ತಿದ್ದ ಸೋನು ಶ್ರೀನಿವಾಸ ಗೌಡ ಅವರನ್ನು ಅರೆಸ್ಟ್ ಮಾಡಲಾಗಿದೆ. ಬಾಲಕಿಯೊಬ್ಬಳನ್ನು ಅನಧಿಕೃತವಾದಿ ಮನೆಯಲ್ಲಿ ಇಟ್ಟುಕೊಂಡಿದ್ದ ಆರೋಪದ ಮೇಲೆ ಸೋನು ಗೌಡ ಅವರನ್ನ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಜಂಟಿ ಕಾರ್ಯಚರಣೆ ವೇಳೆ ಬಂಧನವಾಗಿದೆ.


    ಸಾಮಾಜಿಕ ಜಾಲತಾಣದಲ್ಲಿ ತನ್ನ ವಿಡಿಯೋಗಳಿಂದ ಪ್ರಸಿದ್ದಿ ಹೊಂದಿದ್ದ ಸೋನು ಶ್ರೀನಿವಾಸ ಗೌಡ ಇತ್ತೀಚೆಗೆ ಯುಟ್ಯೂಬ್ ವಿಡಿಯೋಗಳಲ್ಲಿ ತಾನು ಒಬ್ಬಳು ಬಾಲಕಿಯನ್ನು ದತ್ತು ತೆಗೆದುಕೊಂಡಿದ್ದೇನೆ ಎಂದು ಹೇಳಿ ಕಂಟೆಂಟ್ ಮಾಡಿದ್ದರು, ಆಗಲೆ ಹಲವು ವೀಕ್ಷಕರು ಇದು ಕಾನೂನು ಪ್ರಕಾರ ತಪ್ಪು ಎಂದು ಆಕೆಗೆ ಹೇಳಿದ್ದರು. ಆದರೆ ಅದನ್ನು ಕ್ಯಾರೆ ಮಾಡದೇ ಸ್ವತಃ ಸೋನು ಗೌಡ ಅವರೇ ಆ ಮಗುವನ್ನು ಇಟ್ಟುಕೊಂಡು ವಿಡಿಯೋ ಕೂಡ ಮಾಡಿದ್ದರು. ಈ ಮಗುವಿನ ಪರಿಚಯವನ್ನು ಸೋನು ಸೋಷಿಯಲ್ ಮೀಡಿಯಾದಲ್ಲಿ ಮಾಡಿದ್ದರು.
    ದತ್ತು ಪಡೆಯುವ ಯಾವುದೇ ನಿಯಮವನ್ನು ದತ್ತು ಪಾಲಿಸದೇ ಇರುವ ಕಾರಣಕ್ಕಾಗಿ ಮಕ್ಕಳ ಹಕ್ಕು ಕಸಿದಿರುವ ಆರೋಪ ಸೋನು ಮೇಲಿದೆ. ಉತ್ತರ ಕರ್ನಾಟಕದ 8 ವರ್ಷದ ಮಗು ಅದಾಗಿದ್ದು, ಸಿಂಪತಿ ಗಿಟ್ಟಿಸಿಕೊಂಡು ಸೆಲೆಬ್ರಿಟಿ ಆಗಲು ಸೋನು ಮುಂದಾಗಿದ್ದರು ಎನ್ನುವ ಆರೋಪ ಕೂಡ ಇದೆ.


    ಕಾನೂನು ಬಾಹಿರವಾಗಿ ಅವರು ಮಗುವನ್ನು ದತ್ತು ಪಡೆದಿದ್ದಾರೆ. ಈ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply