LATEST NEWS
ಆತ್ಮಚರಿತ್ರೆಯಲ್ಲಿ ರಮಾನಾಥ ರೈ ಪೋಟೋ ಇದೆ, ಆದರೆ ಕಾಂಟ್ರವರ್ಸಿ…? – ಜನಾರ್ಧನ ಪೂಜಾರಿ
ಆತ್ಮಚರಿತ್ರೆಯಲ್ಲಿ ರಮಾನಾಥ ರೈ ಪೋಟೋ ಇದೆ, ಆದರೆ ಕಾಂಟ್ರವರ್ಸಿ…? – ಜನಾರ್ಧನ ಪೂಜಾರಿ
ಮಂಗಳೂರು ಜನವರಿ 22: ಕಾಂಗ್ರೇಸ್ ನ ಹಿರಿಯ ಮುಖಂಡ ಬಿ. ಜನಾರ್ಧನ ಪೂಜಾರಿ ಅವರ ಆತ್ಮಚರಿತ್ರೆ ಜನವರಿ 26 ರಂದು ಬಿಡುಗಡೆಯಾಗಲಿದ್ದು , ಈ ಸಂಬಂಧ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದರು. ನನ್ನ ಆತ್ಮಚರಿತ್ರೆಯಲ್ಲಿ ರಮಾನಾಥ ರೈಯವರ ಫೋಟೊ ಇದೆ ಆದರೆ ಕಾಂಟ್ರವರ್ಸಿಯಾಗುವ ಯಾವುದೇ ವಿಚಾರ ಪುಸ್ತಕದಲ್ಲಿಲ್ಲ ಎಂದು ಹೇಳಿದರು.
ರಮಾನಾಥ ರೈ ಕುರಿತಂತೆ ಉಲ್ಲೇಖವಿದ್ದು ಎಲ್ಲವೂ ಬರೆದಿದ್ದೇನೆ, ವಿಷಯವನ್ನು ಇದ್ದ ಹಾಗೇ ನಿಷ್ಠುರವಾಗಿಯೇ ಬರೆದಿದ್ದೇನೆ ಎಂದು ಹೇಳಿದರು. ನಾನು ಸತ್ಯವನ್ನೇ ಬರೆದಿದ್ದೇನೆ ಆದರೆ ಕಾಂಟ್ರವರ್ಸಿ ಇಲ್ಲವೆಂದು ನಾನು ಹೇಳುವುದಿಲ್ಲ ಎಂದು ತಿಳಿಸಿದರು. ನನಗೆ ೮೦ ವರ್ಷ ಕಳೆದರೂ ಹಳೆಯ ನೆನಪು ಇನ್ನೂ ಇರುವುದು ನೋಡಿ ನನಗೇ ಆಶ್ಚರ್ಯವಾಯಿತು ಎಂದು ಜನಾರ್ಧನ ಪೂಜಾರಿ ಹೇಳಿದರು.
ಪದೇ ಪದೇ ಎಸ್ಪಿಗಳ ಟ್ರಾನ್ಸ್ ಫರ್ ಮಾಡುವುದು ಸರಿಯಲ್ಲ ಎಂದು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ತಿಳಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳನ್ನು, ಸಚಿವರನ್ನು ಹೇಳುವವರು ಕೇಳುವವರು ಇಲ್ಲವೇ ? ಎಂದು ಪ್ರಶ್ನೆ ಮಾಡಿದರು. ಪೊಲೀಸರಿಗೆ ಹೆಂಡ್ತಿ ಮಕ್ಕಳು ಇಲ್ವಾ? ಈ ರೀತಿ ವರ್ಗಾವಣೆ ಮಾಡಿದರೆ ಅವರನ್ನು ಯಾರೂ ಕೇಳುವವರಿಲ್ವಾ? ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಟ್ರಾನ್ಸ್ ಫರ್ ನ ಹಿಂದೆ ಮುಖ್ಯಮಂತ್ರಿಗಳ ಕೈವಾಡವಿದ್ದರೆ ನಾನು ಖಂಡಿಸುತ್ತೇನೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರು ಅವರ ಮಾತು ಕೇಳುವುದಿಲ್ಲವೆಂದು ಎಸ್ಪಿ ಅವರನ್ನು ವರ್ಗಾಯಿಸಿದಲ್ಲಿ ಅದನ್ನು ಅವರು ಅನುಭವಿಸುತ್ತಾರೆ. ಮುಂದಿನ ಚುನಾವಣೆ ಹೆಚ್ಚೇನೂ ದೂರವಿಲ್ಲ ಎಂದು ಹೇಳಿದರು.
You must be logged in to post a comment Login