LATEST NEWS
ಫೆಬ್ರವರಿ ಮೂರನೇ ವಾರದೊಳಗೆ ಜೆಡಿಎಸ್ 224 ಸ್ಥಾನಗಳ ಅಭ್ಯರ್ಥಿ ಪಟ್ಟಿ – ಎಚ್.ಡಿ ದೇವೇಗೌಡ
ಫೆಬ್ರವರಿ ಮೂರನೇ ವಾರದೊಳಗೆ ಜೆಡಿಎಸ್ 224 ಸ್ಥಾನಗಳ ಅಭ್ಯರ್ಥಿ ಪಟ್ಟಿ – ಎಚ್.ಡಿ ದೇವೇಗೌಡ
ಮಂಗಳೂರು ಜನವರಿ 22: ಜಿಲ್ಲೆಯಲ್ಲಿ ಈ ಹಿಂದೆ ಶಾಂತಿಯಾತ್ರೆ ನಡೆಸಲು ನಿರ್ಧರಿಸಲಾಗಿತ್ತು, ಆದರೆ ಶಾಂತಿಯಾತ್ರೆಗೆ ಅವಕಾಶ ನಿರಾಕರಿಸಿದ್ದರು, ಶಾಂತಿಯುತವಾಗಿ ಯಾತ್ರೆ ನಡೆಸಲು ಕೇಳಿದ ಅವಕಾಶ ನಿರಾಕರಿಸಿದ್ದು ಆಶ್ಚರ್ಯ ತಂದಿತ್ತು ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.
ಮಂಗಳೂರಿನಲ್ಲಿ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸುದ್ದಿಗೋಷ್ಠಿ ಮಾತನಾಡಿದ ಅವರು ಕರಾವಳಿಯ ಮೂರು ಜಿಲ್ಲೆಯಲ್ಲಿ ನಮ್ಮ ಪಕ್ಷ ಅಷ್ಟೊಂದು ಪ್ರಬಲವಾಗಿಲ್ಲ, ಆದರೂ ಪಕ್ಷ ಸಂಘಟನೆಗೆ ಪ್ರಯತ್ನ ಮಾಡುತ್ತಿದ್ದೇನೆ. ಈ ಹಿನ್ನಲೆಯಲ್ಲಿ ಫೆಬ್ರವರಿ ಎರಡನೇ ವಾರದಲ್ಲಿ ಮಂಗಳೂರಿನಲ್ಲಿ ದೊಡ್ಡ ಸಮಾವೇಶ ನಡೆಸಿ, ಪಕ್ಷದ ಚುನಾವಣಾ ಅಭ್ಯರ್ಥಿ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.
ಫೆಬ್ರವರಿ ಮೂರನೇ ವಾರದೊಳಗೆ 224 ಕ್ಷೇತ್ರಗಳ ಅಭ್ಯರ್ಥಿಗಳನ್ನು ಫೈನಲ್ ಮಾಡಲಾಗುವುದು ಎಂದು ಜೆಡಿಎಸ್ ವರಿಷ್ಠ ದೇವೇಗೌಡ ತಿಳಿಸಿದ್ದಾರೆ. ಯಾರ ಮೇಲೂ ಸೇಡಿನ ರಾಜಕೀಯ ಮಾಡಲು ಹೋಗೋದಿಲ್ಲ ಎಂದು ಹೇಳಿದ ಅವರು ಜೆಡಿಎಸ್ ಶಾಸಕರ ಪಕ್ಷಾಂತರ ವಿಚಾರದ ಬಗ್ಗೆ ಮಾತನಾಡಿದ ಅವರು ನಮ್ಮ ತಾಳ್ಮೆಗೂ ಮಿತಿ ಇದೆ ಹಾಗಾಗಿ ಪಕ್ಷದಿಂದ ಉಚ್ಛಾಟನೆ ಮಾಡಿದ್ದೇವೆ ಎಂದರು.
You must be logged in to post a comment Login