Connect with us

    DAKSHINA KANNADA

    ಮಗುವಿನ ಮೇಲೆ ಓಡಿದ ಕಂಬಳ ಕೋಣಗಳು

    ಮಗುವಿನ ಮೇಲೆ ಓಡಿದ ಕಂಬಳ ಕೋಣಗಳು

    ಪುತ್ತೂರು ಜನವರಿ 22: ನಿಷೇಧದ ಗೊಂದಲದಿಂದ ಪಾರಾದ ತುಳುನಾಡಿನ ಜಾನಪದ ಕ್ರೀಡೆಯಲ್ಲಿ ಮತ್ತೆ ಅವಘಡವೊಂದು ಸಣ್ಣದರಲ್ಲೇ ತಪ್ಪಿದೆ.

    ಪುತ್ತೂರಿನ ಮಹಾಲಿಂಗೇಶ್ವರ ದೇವರಗದ್ದೆಯಲ್ಲಿ ಜನವರಿ 20 ರಂದು ನಡೆದ ಕಂಬಳದಲ್ಲಿ ಈ ಘಟನೆ ನಡೆದಿದ್ದು, ಸಣ್ಣ ಮಗುವೊಂದು ಕೋಣಗಳ ಕಾಲಿನಡಿಗೆ ಬಿದ್ದು ಅದೃಷ್ಟವಶಾತ್ ಪಾರಾಗಿದೆ. ಕೋಣಗಳು ಕಂಬಳ ಕೆರೆಯಲ್ಲಿ ಓಡಿದ ಬಳಿಕ ತನ್ನ ಓಟದ ಫಿನಿಶಿಂಗ್ ಪಾಯಿಂಟ್ ಕಡೆ ಬರುತ್ತಿದ್ದ ಸಂದರ್ಭದಲ್ಲಿ ಅಲ್ಲೇ ನಿಂತು ಕಂಬಳ ವೀಕ್ಷಿಸುತ್ತಿದ್ದ ಮಗು ಅನಿರೀಕ್ಷಿತವಾಗಿ ಕೋಣಗಳ ಮುಂದೆ ಸಿಕ್ಕಿ ಹಾಕಿಕೊಂಡಿದೆ.

    ಓಟದಲ್ಲಿ ನಿರತವಾಗಿದ್ದ ಕೋಣಗಳು ಮಗುವಿನ ಮೇಲೆ ದಾಟಿ ಹೋದ ಪರಿಣಾಮ ಭಾರೀ ಅನಾಹುತವೇ ಸಂಭವಿಸುತ್ತಿತ್ತು . ಆದರೆ ಮಗು ಅದೃಷ್ಟವಶಾತ್ ಪಾರಾಗಿದೆ.ಆದರೆ ಕಂಬಳ ಆಯೋಜಕರು ಮಾತ್ರ ಕಂಬಳದಲ್ಲೇ ಬ್ಯುಸಿಯಾಗಿದ್ದರು.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply