KARNATAKA
ಬೆಂಗಳೂರಿನಲ್ಲಿ ಬೆಳ್ಳಂ ಬೆಳಗ್ಗೆ ಶೂಟೌಟ್: ಇಬ್ಬರ ಬಂಧನ

ಬೆಂಗಳೂರು, ಜುಲೈ 21: ಬೆಳ್ಳಂ ಬೆಳಗ್ಗೆ ಬೆಂಗಳೂರು ಪೊಲೀಸರ ಪಿಸ್ತೂಲ್ ಸೌಂಡ್ ಸುದ್ದಿಮಾಡಿದೆ. ರೌಡಿ ಶೀಟರ್ ಬಬ್ಲಿನನ್ನು ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಕೋರಮಂಗಲ ಠಾಣೆ ಪೊಲೀಸರು ಗುಂಡು ಹಾರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಜುಲೈ 19ರಂದು ಬೆಂಗಳೂರಿನ ಕೋರಮಂಗಲದಲ್ಲಿ ಬ್ಯಾಂಕಿಗೆ ನುಗ್ಗಿ ಪತ್ನಿ ಮತ್ತು ಮಗಳ ಎದುರಲ್ಲೇ ಬಬ್ಲಿಯನ್ನು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು.

ಕೊಲೆ ಆರೋಪಿಗಳಾದ ರವಿ ಮತ್ತು ಪ್ರದೀಪ್ ಬೇಗೂರು ಕೆರೆ ಸಮೀಪವಿರುವ ಮಾಹಿತಿ ತಿಳಿದ ಪೊಲೀಸರು ಬಂಧನಕ್ಕೆ ತೆರಳಿದ್ದಾರೆ. ಈ ವೇಳೆ ಆರೋಪಿಗಳ ಬಂಧನಕ್ಕೆ ಪೊಲೀಸರು ಸೂಚನೆ ನೀಡಿದ್ದರೂ ಸಬ್‌ಇನ್ಸ್ಪೆಕ್ಟರ್ ಸಿದ್ದಪ್ಪ ಮತ್ತು ಎಎಸ್‌ಐ ರವೀಂದ್ರ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾದಾಗ ಇನ್ಸ್ ಪೆಕ್ಟರ್ ರವಿ ಫೈರಿಂಗ್ ಮಾಡಿದ್ದಾರೆ. ಫೈರಿಂಗ್ ಬಳಿಕ ಆರೋಪಿಗಳನನ್‌ಉ ವಶಕ್ಕೆ ಪಡೆಯಲಾಗಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.