Connect with us

DAKSHINA KANNADA

ಆಸ್ಕರ್ ಆರೋಗ್ಯ ವಿಚಾರಿಸಿ ಬಂದು ಭಾವುಕರಾಗಿ ಗಳಗಳನೆ ಅತ್ತ ಜನಾರ್ದನ ಪೂಜಾರಿ

ಮಂಗಳೂರು, ಜುಲೈ 21: ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್ ಅವರ ಆರೋಗ್ಯ ವಿಚಾರಿಸಲು ಬಂದ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್​ನ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರು ಭಾವುಕರಾಗಿ ಆಸ್ಪತ್ರೆ ಮುಂದೆ ಗಳಗಳನೆ ಅತ್ತರು.

ಯೋಗ ಮಾಡುವ ವೇಳೆ ಜಾರಿ ಬಿದ್ದು ಯೆನೆಪೊಯ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅವರ ಆರೋಗ್ಯ ವಿಚಾರಿಸಿ ಹೊರಬಂದ ಜನಾರ್ದನ ಪೂಜಾರಿ ಅವರು, ಅವರ ಆರೋಗ್ಯ ಸ್ಥಿತಿ ನೆನೆದು ಗಳಗಳನೆ ಕಣ್ಣೀರಿಟ್ಟರು. ಅವರಿಗೆ ಖಂಡಿತ ಏನೂ ಆಗುವುದಿಲ್ಲ, ದೇವರು ಅವರನ್ನು ಬದುಕಿಸುತ್ತಾರೆ. ಅವರು ಖಂಡಿತ ಬದುಕುತ್ತಾರೆ.

ಸಾರ್ ಸಾರ್ ಎಂದು ನನ್ನ ಜೊತೆಗೆ ಮಾತನಾಡುತ್ತಿದ್ದರು ಎಂದು ನೆನೆದು ಭಾವುಕರಾದರು. ಆಸ್ಕರ್ ಅವರ ಸ್ಥಿತಿ ಗಂಭೀರವಾಗಿರುವ ಮಾಹಿತಿ ತಿಳಿದ ಜನಾರ್ದನ ಪೂಜಾರಿ ಅವರು ತಮ್ಮ ಇಳಿವಯಸ್ಸಿನಲ್ಲಿಯೂ ಆಸ್ಕರ್ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದಿದ್ದರು.