Connect with us

DAKSHINA KANNADA

ಮಂಗಳೂರಿನ ಈದ್ಗಾ ಮಸೀದಿಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

ಮಂಗಳೂರು ಜುಲೈ 21: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್‌ ಹಬ್ಬವನ್ನು ಇಂದು ಕರಾವಳಿಯಾದ್ಯಂತ ಅಚರಿಸಲಾಗುತ್ತಿದೆ.

ಅದರಂತೆ ಮಂಗಳೂರಿನ ಬಾವುಟಗುಡ್ಡೆಯ ಈದ್ಗಾ ಮಸೀದಿಯಲ್ಲಿ ಸರಳ ರೀತಿಯ ಪ್ರಾರ್ಥನೆಯನ್ನ ಸಲ್ಲಿಸಲಾಯಿತು. ಸರಕಾರದ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಂತೆ ಆಯಾ ಮಸೀದಿಗಳಲ್ಲಿ ಸೇರುವ ಜನರ ಸಾಮರ್ಥ್ಯಕ್ಕೆ ಅನುಗುಣವಾಗಿ ಶೇ. 50ನ್ನು ಮೀರದಂತೆ ಹಂತ ಹಂತವಾಗಿ ಸಾಮೂಹಿಕ ನಮಾಝ್ ನೆರವೇರಿಸಲಾಯಿತು.

ಇನ್ನೂ ಮಾಸ್ಕ್ ಧಾರಣೆ ಕಡ್ಡಾಯ, 65 ವರ್ಷ ಪ್ರಾಯ ಮೇಲ್ಪಟ್ಟವರು ಮತ್ತು 10 ವರ್ಷಕ್ಕಿಂತ ಕೆಳಗಿನ ಮಕ್ಕಳು ಸಾಮೂಹಿಕ ನಮಾಝ್‌ ನಲ್ಲಿ ಭಾಗವಹಿಸುವಂತಿಲ್ಲ ಸೇರಿದಂತೆ ಕೊರೋನಾ ಮಾರ್ಗಸೂಚಿ ಪಾಲಿಸುವಂತೆ ರಾಜ್ಯ ಸರ್ಕಾರ ನಿರ್ದೇಶನ ನೀಡಿತ್ತು.