Connect with us

MANGALORE

ಕಾಂಗ್ರೇಸ್ ಹಿರಿಯ ಮುಖಂಡ ಪೂಜಾರಿ ರಾಮಮಂದಿರ ಹೇಳಿಕೆ ಸ್ವಾಗತಿಸಿದ ಶೋಭಾ ಕರಂದ್ಲಾಜೆ

ಕಾಂಗ್ರೇಸ್ ಹಿರಿಯ ಮುಖಂಡ ಪೂಜಾರಿ ರಾಮಮಂದಿರ ಹೇಳಿಕೆ ಸ್ವಾಗತಿಸಿದ ಶೋಭಾ ಕರಂದ್ಲಾಜೆ

ಮಂಗಳೂರು ಡಿಸೆಂಬರ್ 2: ರಾಮಂದಿರ ನಿರ್ಮಾಣದ ಬಗ್ಗೆ ಕಾಂಗ್ರೇಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಹೇಳಿಕೆಯನ್ನು ಸಂಸದೆ ಶೋಭಾ ಕರಂದ್ಲಾಜೆ ಸ್ವಾಗತಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು ಒಂದು ಕಾಲದಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ಕಾಂಗ್ರೇಸ್ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಅವರು ಈಗ ರಾಮಮಂದಿರ ನಿರ್ಮಾಣ ಆಗುತ್ತೆ ಎಂದು ಹೇಳಿದ್ದಾರೆ ಅಂದ್ರೆ ಮಂದಿರ ನಿರ್ಮಾಣ ಖಂಡಿತವಾಗಿ ಆಗುತ್ತದೆ ಎಂದು ಹೇಳಿದರು.

ಕಾಂಗ್ರೇಸ್ ಹಿರಿಯ ಮುಖಂಡರು ರಾಮಮಂದಿರ ನಿರ್ಮಾಣದ ಬಗ್ಗೆ ತಮ್ಮ ಬೆಂಬಲ ನೀಡುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ ಸುಪ್ರೀಂ ಕೋರ್ಟ್ ನಲ್ಲಿ ರಾಮ ಮಂದಿರ ವಿರುದ್ಧ ಹೋರಾಡ್ತಾ ಇದೆ. ಇದು ಕಾಂಗ್ರೆಸ್ ಕೆಟ್ಟ ರಾಜನೀತಿ ಅನುಸರಿಸುತ್ತಿದೆ ಎಂದು ತೋರಿಸುತ್ತದೆ ಎಂದು ಹೇಳಿದರು. ಕಾಂಗ್ರೆಸ್ ನಿಂದಾಗಿಯೇ ಸುಪ್ರೀಂ ಕೋರ್ಟ್ ನಲ್ಲಿ ರಾಮಮಂದಿರ ವಿಚಾರಣೆ ವಿಳಂಭವಾಗಿದ್ದು ಎಂದು ಹೇಳಿದರು.

Facebook Comments

comments