ಮುಸ್ಲಿಂ ಹುಡುಗನಿಂದ‌ ಹಿಂದೂ ಹುಡುಗಿ ಅತ್ಯಾಚಾರಕ್ಕೊಳಗಾದರೆ ಸಂಘಕ್ಕೆ ಆಗುವಷ್ಟು ಖುಷಿ ಯಾರಿಗೂ ಆಗಲ್ಲ – ಮಹೇಂದ್ರ ಕುಮಾರ್

ಮಂಗಳೂರು ಡಿಸೆಂಬರ್ 2: ಮುಸ್ಲಿಂ ಹುಡುಗನಿಂದ‌ ಹಿಂದೂ ಹುಡುಗಿ ಅತ್ಯಾಚಾರಕ್ಕೊಳಗಾದರೆ ಸಂಘಕ್ಕೆ ಆಗುವಷ್ಟು ಖುಷಿ ಯಾರಿಗೂ ಆಗಲ್ಲ ಎಂದು ಭಜರಂಗದಳದ ಮಾಜಿ‌ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಅಭಿಮತ ಮಂಗಳೂರು ವತಿಯಿಂದ ನಡೆದ ಜನನುಡಿ ಸಮಾವೇಶದಲ್ಲಿ ಹೊರಳು ನೋಟ ಎಂಬ ಗೋಷ್ಠಿಯಲ್ಲಿ ವಿಷಯ ಮಂಡನೆ ಮಾಡಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಗುರಿ ಬಿಜೆಪಿ ಅಲ್ಲದೆ ಮತ್ತೇನೂ ಅಲ್ಲ. ಸಂಘದ ವ್ಯಾಪ್ತಿಯಲ್ಲಿರುವ ನೂರಾರು ಸಂಘಟನೆಗಳ ಮೂಲಕ ಕೆಲಸಗಳನ್ನು ಮಾಡಿಸಿಕೊಳ್ಳುತ್ತ ಬಿಜೆಪಿಗೆ ಅಧಿಕಾರ ತಂದುಕೊಡುವುದೇ ಸಂಘದ ಕೆಲಸ.

ಆರ್‌ಎಸ್ಎಸ್, ವಿಎಚ್‌ಪಿ,‌ ಭಜರಂಗದಳ ಹಿಂದೂ ಸಮಾಜದ ಸಂಘಟನೆಗಳು ಹೊರತು ಅವು ಹಿಂದೂ ಸಮಾಜವಲ್ಲ. ಬಿಜೆಪಿ ಬತ್ತಳಿಕೆಯಲ್ಲಿ ಎಲ್ಲವೂ ಖಾಲಿಯಾದಾಗ ಅಯೋಧ್ಯೆ ವಿಚಾರವನ್ನು ಮುಂದೆ ಬರುತ್ತದೆ. ಸಂಘ ಪರಿವಾರದಲ್ಲಿರುವ ಜಾತಿ ಅಸ್ಪೃಶ್ಯತೆಯಿಂದಾಗಿ ನಾನು ಸಂಘ ಸಿದ್ಧಾಂತದಿಂದ ವಿಮುಖನಾಗಲು ಒಂದು ಕಾರಣ ಎಂದು ಹೇಳಿದರು.

ದೇಶದಲ್ಲಿ ಹಿಂದೂ ವಿರೋಧಿಯಾಗಿರುವ ಸಂಘಟನೆಯಿದ್ದರೆ ಅದು ಆರ್‌ಎಸ್‌ಎಸ್‌. ಅದು ಹಿಂದೂ ಸಮಾಜದ ಸಮಸ್ಯೆಗೆ ಔಷಧಿ ಕೊಡುವುದಿಲ್ಲ. ಸಂಘವೆಂದರೆ ಮದ್ಯ ಅಥವಾ ಅಫೀಮು ಇದ್ದಂತೆ. ಅದು ಮತ್ತೇರಿಸುತ್ತದೆಯೇ ಹೊರತು ಪರಿಹಾರ ಕೊಡುವುದಿಲ್ಲ. ದಲಿತಪರ ಧ್ವನಿ ಎತ್ತಿದ ಕೂಡಲೇ ಸಂಘದ ವಿರೋಧಿಗಳು ಎಂದು ಬಿಂಬಿಸಲಾಗುತ್ತದೆ. ಇದೇಕೆ ಹೀಗೆ ಎಂಬ ಪ್ರಶ್ನೆ ಹಲವರನ್ನು ಕಾಡುತ್ತದೆ ಎಂದು ಅವರು ಹೇಳಿದರು.

ಮುಸ್ಲಿಮರನ್ನು ಧರ್ಮದ ಕಾರಣಕ್ಕಾಗಿ ದ್ವೇಷ ಮಾಡುವುದಾದರೆ ಅದು ನಿಜವಾದ ದೇಶದ್ರೋಹ ಎಂದು ಈ ಸಂದರ್ಭದಲ್ಲಿ ಹೇಳಿದರು.

VIDEO

0 Shares

Facebook Comments

comments