LATEST NEWS
ಜನಾರ್ಧನ ಪೂಜಾರಿ ಎನ್ ಕೌಂಟರ್ ಗೆ ಒತ್ತಾಯ – ಆಡಿಯೋ ವೈರಲ್

ಜನಾರ್ಧನ ಪೂಜಾರಿ ಎನ್ ಕೌಂಟರ್ ಗೆ ಒತ್ತಾಯ – ಆಡಿಯೋ ವೈರಲ್
ಮಂಗಳೂರು ಡಿಸೆಂಬರ್ 2: ಕಾಂಗ್ರೇಸ್ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಯಬ್ಬರು ಹಿರಿಯ ಕಾಂಗ್ರೇಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಬಿ. ಜನಾರ್ಧನ ಪೂಜಾರಿ ವಿರುದ್ಧ ಹರಿಹಾಯ್ದ ಆಡಿಯೋ ಕ್ಲಿಪ್ ಒಂದು ಇದೀಗ ವೈರಲ್ ಆಗುತ್ತಿದೆ.
ಈ ಆಡಿಯೋದಲ್ಲಿ ಪೂಜಾರಿಯವರನ್ನು ಹೀನಾಯವಾಗಿ ನಿಂದಿಸಲಾಗಿದೆ. ಅಲ್ಲದೆ ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಪರ ಧ್ವನಿ ಎತ್ತಿದ ಪೂಜಾರಿಯವರನ್ನು ಎನ್ ಕೌಂಟರ್ ಮಾಡಬೇಕೆಂದೂ ಆಡಿಯೋದಲ್ಲಿ ಆ ವ್ಯಕ್ತಿ ಒತ್ತಾಯಿಸುತ್ತಿದ್ದಾನೆ.

ಸಾಲಮೇಳದ ಮೂಲಕ ಲಕ್ಷಾಂತರ ಅಲ್ಪಸಂಖ್ಯಾತ ಕುಟುಂಬಗಳಿಗೆ ದಾರಿ ದೀಪವಾಗಿದ್ದ ಪೂಜಾರಿಯವರನ್ನು ಇದೀಗ ಅಲ್ಪಸಂಖ್ಯಾತರೇ ದೂಷಿಸ ಹೊರಟಿರುವುದು ದುರಂತವೇ ಎನ್ನುವ ಕಮೆಂಟ್ ಗಳೂ ಈ ಅಡಿಯೋ ಮೇಲೆ ಬರಲಾರಂಭಿಸಿದೆ.
ಆಡಿಯೋ ಸಾರಾಂಶ
ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಸಂಸದ ಜನಾರ್ದನ ಪೂಜಾರಿಯವರು ಆರ್‍ಎಸ್‍ಎಸ್‍ನವರಿಗೆ ಹುಟ್ಟಿದ್ದು. ಆರ್‍ಎಸ್‍ಎಸ್‍ನವರೊಂದಿಗೆ ಹೊಂದಾಣಿಕೆ ಇದ್ದಾರೆಂದು ಹೇಳಿ ಕಳೆದ 10 ವರ್ಷದಿಂದ ನಾನು ಹೇಳಿಕೆ ಕೊಡುತ್ತಿರುವಾಗ ಯಾರೂ ನಂಬುತ್ತಿರಲಿಲ್ಲ. ಕಾಂಗ್ರೆಸ್ ಪಕ್ಷದವರೇ ನನಗೆ ಬೈಯುತ್ತಿದ್ದರು. ಈಗೀಗ ಎಲ್ಲರಿಗೂ ಗೊತ್ತಾಗುತ್ತಿದೆ.
ಆರ್‍ಎಸ್‍ಎಸ್‍ನೊಂದಿಗೆ ಹೊಂದಾಣಿಕೆ ಆಗಿದ್ದಾರೆ. ಇವರ ಪುಸ್ತಕ ಬಿಡುಗಡೆ ಮಾಡುವ ಸಂದರ್ಭದಲ್ಲಿ ಕರ್ನಾಟಕದ ರಾಜ್ಯದ ಮುಖ್ಯಮಂತ್ರಿ ಇರುವಾಗ ಅವರನ್ನು ಕರಿಯುತ್ತಿರಲಿಲ್ಲ. ಆರ್‍ಎಸ್‍ಎಸ್ ಪ್ರಭಾಕರ ಭಟ್ಟ, ಅದರ ಮುಖ್ಯಸ್ಥರನ್ನು ತರಿಸಿ ಉದ್ಘಾಟನೆ ಮಾಡಿಸುವಾಗಲೇ ಪ್ರತಿಯೊಬ್ಬ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಪ್ರಜೆಯೂ ಆಲೋಚನೆ ಮಾಡಬೇಕಿತ್ತು. ಇವರು ಕೋಮುವಾದಿ ಪ್ರಭಾಕರ್ ಭಟ್ಟನೊಂದಿಗೆ ಹೊಂದಾಣಿಕೆ, ಆರ್‍ಎಸ್‍ಎಸ್‍ನೊಂದಿಗೆ ಹೊಂದಾಣಿಕೆ ಆಗಿ ಇರುವಂತಹ ಜನಾರ್ದನ ಪೂಜಾರಿಯನ್ನು ಯಾವತ್ತೂ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡುವುದಿಲ್ಲ. ಅಷ್ಟರ ತನಕ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಯೊಬ್ಬ ಮುಸ್ಲಿಮರು ಬೆಂಬಲ ಕೊಡಬಾರದು. ಇಂತಹ ನಾಲಾಯಕ್ ಬಿಜೆಪಿ, ಆರ್‍ಎಸ್‍ಎಸ್ ಒಟ್ಟಿಗೆ ಹೊಂದಾಣಿಕೆ ಇರುವ ಜನಾರ್ದನ ಪೂಜಾರಿಯನ್ನು ಯಾವ ಕಾರಣಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಇಟ್ಟಿದ್ದೀರಿ ಎಂದು ಬಹಿರಂಗವಾಗಿ ಕಾಂಗ್ರೆಸ್‍ನವರು ಹೇಳಿಕೆ ಕೊಡಬೇಕು.
ಇಂತಹ ಕೊಳಕು ಮನುಷ್ಯನಿಗೆ ದೇವರು ಇಷ್ಟು ಆಯಸ್ಸು ಕೊಟ್ಟಿದ್ದೇ ದೊಡ್ಡ ದುರಂತ. ಇಂತಹ ಮನುಷ್ಯನಿಗೆ ನಮ್ಮ ದೇಶದಲ್ಲಿ ಇರಲು ಬಿಡಬಾರದು. ಇವನನ್ನು ಎನ್‍ಕೌಂಟರ್ ಮಾಡಿ ಕೊಲ್ಲಬೇಕು. ನಮ್ಮ ಸಂವಿಧಾನ ವಿರೋಧಿ ಹೇಳಿಕೆ ಕೊಡುತ್ತಿದ್ದಾರೆ. ಸುಪ್ರ್ರಿಂ ಕೋರ್ಟ್ ನಲ್ಲಿ ಒಂದು ಕೇಸ್ ಪೆಂಡಿಗ್ ಇರುವಾಗ ನಾನು ಇಲ್ಲಿ ರಾಮ ಮಂದಿರ ಕಟ್ಟಿಯೇ ತೀರುತ್ತೇನೆ ಎಂದು ಯಾರೆಲ್ಲ ಹೇಳಿಕೆ ಕೊಡುತ್ತಾರೋ ಅವರನ್ನು ಎನ್‍ಕೌಂಟರ್ ಮಾಡಬೇಕು. ಎನ್‍ಕೌಂಟರ್ ಮಾಡಿ ದೇಶದಿಂದ ಶೂಟ್ ಮಾಡಿ ಕೊಲ್ಲಬೇಕು. ಇಲ್ಲದಿದ್ದರೆ ದೇಶದಿಂದ ಗಡೀಪಾರು ಮಾಡಬೇಕು. ಇಂತಹ ಆರ್‍ಎಸ್‍ಎಸ್‍ಗೆ ಹುಟ್ಟಿದಂತಹ ಜನಾರ್ದನ ಪೂಜಾರಿ ಸಮೇತ ಯಾವ ಕಾರಣಕ್ಕೂ ನಮ್ಮ ಜಿಲ್ಲೆಯಲ್ಲಿ ಇವರನ್ನು ಇಡಬಾರದು. ನಮ್ಮ ದೇಶದಲ್ಲಿ ಇಡಬಾರದು. ಯಾವ ಕಾರಣಕ್ಕೂ ಕಾಂಗ್ರೆಸ್ ಪಕ್ಷದಲ್ಲಿ ಇಡಬಾರದು