FILM
ಕದ್ರಿ ದೇವಾಲಯಕ್ಕೆ ಶಿವರಾಜ್ ಕುಮಾರ್ ಭೇಟಿ ಪೂಜೆ
ಮಂಗಳೂರು ಸೆಪ್ಟೆಂಬರ್ 14: ಕರಾವಳಿ ಜಿಲ್ಲೆಗಳಲ್ಲಿ ಚಿತ್ರೀಕರಣದಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಇಂದು ಮಂಗಳೂರಿಗೆ ಭೇಟಿ ನೀಡಿದರು. ನಗರದ ಕದ್ರಿ ದೇವಾಲಯಕ್ಕೆ ಭೇಟಿ ನೀಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕದ್ರಿ ಮಂಜುನಾಥೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಕದ್ರಿ ಮೈದಾನದಲ್ಲಿ ಕದ್ರಿ ಫ್ರೆಂಡ್ಸ್ ಆಯೋಜಿಸಿರುವ ಸ್ಟಾರ್ ನೈಟ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳೂರಿಗೆ ಆಗಮಿಸಿರುವ ಶಿವರಾಜ್ ಕುಮಾರ್ ತಮ್ಮ ಬಿಝಿ ಶೆಡ್ಯೂಲ್ ಮಧ್ಯೆಯೂ ಕದ್ರಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು .ದೇವಾಲಯಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಭಕ್ತರೊಂದಿಗೆ ಸೆಲ್ಫಿಗೆ ಪೋಸ್ ನೀಡಿದರು.
ನಿನ್ನೆ ನಟ ಶಿವರಾಜ್ ಕುಮಾರ್ ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಠಮಿಯಲ್ಲಿ ಪಾಲ್ಗೊಂಡು, ಪೇಜಾವರ ಶ್ರೀಗಳ ಆಶಿರ್ವಾದ ಪಡೆದರು.
You must be logged in to post a comment Login