Connect with us

DAKSHINA KANNADA

ಗೋವರ್ಧನ ನೋಡಲು ಬಂದ ಗೋಮಾತೆ ವೈರಲ್ ಆದ ದೃಶ್ಯ

Share Information

ಮಂಗಳೂರು ಸೆಪ್ಟೆಂಬರ್ 14: ಶ್ರೀಕೃಷ್ಣನ ಹಲವು ನಾಮಗಳಲ್ಲಿ ಒಂದಾದ ವಿಠಲ ಹಾಗೆ ಕೃಷ್ಣನಿಗೆ ಪ್ರಿಯವಾದ ಗೋ ಸಂಕುಲವನ್ನು ವಿಠಲ ಎಂದು ಕರೆಯುತ್ತಾರೆ. ವಿಠಲನ ಜನ್ಮಾಷ್ಟಮಿಯ ಅಂಗವಾಗಿ ಶ್ರೀಕೃಷ್ಣನ ಊರಾದ ಉಡುಪಿ ಸೇರಿದಂತೆ ಎಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ,
ದೇವಾಲಯದಲ್ಲಿ ಒಂದೆಡೆ ಜನರು ಶ್ರೀಕೃಷ್ಣನ ದರ್ಶನ ಪಡೆದು ಪುನೀತ ರಾದರೆ ಇನ್ನೊಂದೆಡೆ ಗೋಪಾಲಕನನ್ನು ಕಾಣಲು ಗೋಮಾತೆಯ ದೇವಾಲಯಕ್ಕೆ ಆಗಮಿಸಿದ್ದಳು.
ಈ ಘಟನೆ ನಡೆದಿದ್ದು ಮಂಗಳೂರು ಹೊರವಲಯದ ಕುಂಪಲದ ಗುರು ನಗರದಲ್ಲಿ. ಗುರುನಗರ ಶ್ರೀ ಕೃಷ್ಣ ಮುಖ್ಯಪ್ರಾಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತಿತ್ತು. ಈ ಸಂದರ್ಭದಲ್ಲಿ ಗೋಪಾಲಕನ ಪೂಜೆಯನ್ನು ಕಣ್ತುಂಬಿಕೊಳ್ಳಲು ಅಲ್ಲಿಗೆ ಆಗಮಿಸಿದ್ದ ಗೋವೊಂದು ಶ್ರೀಕೃಷ್ಣನಿಗೆ ಪೂಜೆ ನೆರವೇರಿಸಿ ಮಹಾ ಮಂಗಳಾರತಿ ನಡೆಯುವವರೆಗೂ ದೇವಾಲಯದ ಗರ್ಭಗುಡಿಯ ಹೊರಗೆ ನಿಂತು ಶ್ರೀಕೃಷ್ಣನ ಬಿಂಬವನ್ನು ಕಣ್ತುಂಬಿಕೊಂಡಿತು.

ನಂತರ ಪೂಜೆಯ ಪ್ರಸಾದ ಸ್ವೀಕರಿಸಿ ತೆರಳಿತು. ಈ ದೃಶ್ಯ ಕಂಡು ಭಕ್ತರ ಸಮೂಹ ಮನ ಪುಳಕಿತಗೊಂಡರೆ ಇನ್ನೊಂದೆಡೆ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


Share Information
Advertisement
Click to comment

You must be logged in to post a comment Login

Leave a Reply