ಶಿವ ಪಾದ ಸೇರಿದ ಶಿವಕುಮಾರ
ಮಂಗಳೂರು, ಜನವರಿ 21: ನಡೆದಾಡುವ ದೇವರೆಂದೇ ಹೆಸರುವಾಸಿಯಾದ ತುಮಕೂರು ಸಿದ್ಧಗಂಗಾ ಮಠದ ಶತಾಯುಷಿ ಶಿವಕುಮಾರ ಸ್ವಾಮೀಜಿ ದೇವರ ಪಾದ ಸೇರಿದ್ದಾರೆ.

ಕಳೆದ ಕೆಲವು ದಿನಗಳಿಂದ ಶ್ರೀಗಳ ಆರೋಗ್ಯದಲ್ಲಿ ಭಾರೀ ವೆತ್ಯಾಸ ಕಂಡು ಬಂದ ಹಿನ್ನಲೆಯಲ್ಲಿ ಅವರನ್ನು ಮಠದ ಆಸ್ಪತ್ರೆಯಲ್ಲೇ ತೀವೃ ನಿಗಾ ಘಟಕದಲ್ಲಿದ್ದರು.

1907 ಎಪ್ರಿಲ್ 1 ರಂದು ಮಾಗಡಿ ತಾಲೂಕಿನ ವಿರಾಪುರದಲ್ಲಿ ಜನಿಸಿದ ಡಾ. ಶಿವಕುಮಾರ್ ಅವರಿಗೆ 111 ವರ್ಷ ವಯಸ್ಸಾಗಿತ್ತು.

ತನ್ನ ಧಾರ್ಮಿಕ ಕಾರ್ಯಕ್ರಮಗಳಿಗಿಂತಲೂ ಶಿಕ್ಷಣ ಕ್ಷೇತ್ರದಲ್ಲಿ ಕಾಂತ್ರಿ ಮಾಡುವ ಮೂಲಕ ಗಮನ ಸೆಳೆದ ಸ್ವಾಮೀಜಿ ಲಕ್ಷಾಂತರ ಬಡ ವಿದ್ಯಾರ್ಥಿಗಳ ಪಾಲಿನ ಅಕ್ಷರ ದೇವತೆಯಾಗಿದ್ದರು.

ಬಡ ಹಾಗೂ ಅನಾಥ ಮಕ್ಕಳಿಗೆ ಆಶ್ರಯದಾತರೂ ಆಗಿದ್ದ ಶ್ರೀಗಳ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದ ಲಕ್ಷಾಂತರ ವಿದ್ಯಾರ್ಥಿಗಳು ಇದೀಗ ಸಮಾಜದ ಉನ್ನತ ಸ್ತರದಲ್ಲಿ ಸೇವೆ ಸಲ್ಲಿಸುತ್ತಿರುವುದು ಶ್ರೀಗಳಿಗೆ ಶಿಕ್ಷಣದ ಮೇಲಿದ್ದ ಕಾಳಜಿಯನ್ನು ತೋರಿಸುತ್ತಿತ್ತು.

ಅಕ್ಷರ ದಾಸೋಹ, ಶಿಕ್ಷಣದ ಮೂರ್ತರೂಪ ಸ್ವಾಮೀಜಿ ಅಗಲಿಕೆ ಇಡೀ ದೇಶವನ್ನೇ ದುಖದ ಮಡುವಿಗೆ ದೂಡಿದೆ.

Facebook Comments

comments