FILM
ಪ್ರೇಮಂ ನಟ ನಿವಿನ್ ಪೌಲಿ ವಿರುದ್ದ ಲೈಂಗಿಕ ದೌರ್ಜನ್ಯ ಕೇಸ್
ತಿರುವನಂತಪುರಂ ಸೆಪ್ಟೆಂಬರ್ 03: ಮಲೆಯಾಳಂ ಚಿತ್ರರಂಗದ ಪರಿಸ್ಥಿತಿ ಯಾಕೋ ಸರಿಯಾಗಿರುವಂತೆ ಕಾಣುತ್ತಿಲ್ಲ. ಒಬ್ಬರ ಮೇಲೊಬ್ಬರಂತೆ ನಟರ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣಗಳು ದಾಖಲಾಗುತ್ತಿದೆ. ಇದೀಗ ಪ್ರೇಮಂ ನಟ ನಿವಿನ್ ಪೌಲಿ ವಿರುದ್ದ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾಗಿದೆ.
ಒಂದು ವರ್ಷದ ಹಿಂದೆ ದುಬೈನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು 40 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಮಲಯಾಳಂ ಸಿನಿಮಾ ನಟ ನಿವಿನ್ ಪೌಲಿ ವಿರುದ್ಧ ಮಂಗಳವಾರ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಮಹಿಳೆ ಸೇರಿದಂತೆ ಆರು ಆರೋಪಿಗಳಿದ್ದಾರೆ. ಮೊದಲ ಆರೋಪಿ ಮಹಿಳೆಯಾಗಿದ್ದು, ಪಾಲಿ ಆರನೇ ಆರೋಪಿಯಾಗಿದ್ದಾರೆ ಎಂದು ಐಪಿಸಿ ಸೆಕ್ಷನ್ 376 ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿರುವ ಉನ್ನೂಕಲ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ನಡುವೆ ಪ್ರಕರಣದ ಕುರಿತಂತೆ ಪ್ರತಿಕ್ರಿಯಿಸಿರುವ ನಟ ನಿವಿನ್ ಪೌಲಿ ಇದೊಂದು ಆಧಾರ ರಹಿತವಾದ ಆರೋಪವಾಗಿದ್ದು. ನಾನು ನಿರಪರಾಧಿ ಎಂದು ಪ್ರೂವ್ ಮಾಡಲು ಯಾವುದೇ ಹಂತಕ್ಕೆ ಹೋಗಲು ನಾನು ಸಿದ್ದನಿದ್ದೇನೆ. ಎಲ್ಲದಕ್ಕೂ ಕಾನೂನು ಮೂಲಕವೇ ಉತ್ತರ ನೀಡುತ್ತೇನೆ ಎಂದಿದ್ದಾರೆ.
You must be logged in to post a comment Login