Connect with us

    DAKSHINA KANNADA

    ಮಂಗಳೂರು: ರಿಕ್ಷಾ ಪಾರ್ಕಿನಲ್ಲೇ ಹೃದಯಾಘಾತಕ್ಕೆ ಆಟೋ ಡ್ರೈವರ್ ಬಲಿ…!

    ಮಂಗಳೂರು : ಮಂಗಳೂರು ನಗರದಲ್ಲಿ ಆಟೋ ಪಾರ್ಕಿನಲ್ಲಿದ್ದಗಲೇ ಆಟೋ ಡ್ರೈವರ್ ಓರ್ವ ಹೃದಯಾಘಾತಕ್ಕೆ (heart attack) ಬಲಿಯಾಗಿದ್ದಾರೆ. ನಗರದ ಸೆಂಟ್ರಲ್  ರೈಲ್ವೇ ನಿಲ್ದಾಣದ ರಿಕ್ಷಾ ಪಾರ್ಕ್ ಕ್ಯೂನಲ್ಲಿದ್ದಾಗಲೇ ಈ  ಘಟನೆ ನಡೆದಿದೆ.

    ಬಜಾಲ್ ವಿದ್ಯಾ ನಗರದ ನಿವಾಸಿ ಇಕ್ಬಾಲ್ (47) ಮೃತ ಚಾಲಕನಾಗಿದ್ದಾನೆ. ಪ್ರಸ್ತುತ ಅಡ್ಯಾರ್ ಕಣ್ಣೂರಿನ ಬೋರುಗುಡ್ಡೆಯ ಬಾಡಿಗೆ ಮನೆಯೊಂದರಲ್ಲಿ ಇಕ್ಬಾಲ್ ವಾಸವಾಗಿದ್ದರು. ರಿಕ್ಷಾ ಪಾರ್ಕ್ ನಲ್ಲಿ ಕ್ಯೂ ನಲ್ಲಿರುವಾಗಲೇ ಇಕ್ಬಾಲ್ ರವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ತಕ್ಷಣವೇ ಇತರ ರಿಕ್ಷಾ ಚಾಲಕರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಪತ್ನಿ, ಮೂರು ಮಕ್ಕಳು, ಬಂಧುಮಿತ್ರರನ್ನು ಅಗಲಿದ್ದಾರೆ.

    ಸಂತಾಪ : ನಗರದ ಸೆಂಟ್ರಲ್ ರಿಕ್ಷಾ ಪಾರ್ಕ್ ನಲ್ಲಿ ಕ್ಯೂ ನಲ್ಲಿದ್ದು ವೃತ್ತಿಯಲ್ಲಿರುವಾಗಲೇ ಹೃದಯಾಘಾತದಿಂದ ಮೃತ ಹೊಂದಿದ ಇಕ್ಬಾಲ್ ಕಣ್ಣೂರು ಅವರ ಪರಲೋಕ ಜೀವನವನ್ನು ದೇವರು ಸುಖಗೊಳಿಸಿ ಅನುಗ್ರಹಿಸಲಿ, ಅವರ ಅಗಲುವಿಕೆಯಿಂದ ಕುಟುಂಬಕ್ಕೂ ಬಂದು ಬಳಗಕ್ಕೂ ನೋವನ್ನು ಸಹಿಸುವ ಶಕ್ತಿಯನ್ನು ದೇವರುನು ನೀಡಲಿ ಎಂದು ಸೋಶಿಯಲ್ ಡೆಮಾಕ್ರಟಿಕ್ ಆಟೋ ಚಾಲಕರ ಯೂನಿಯನ್ ಮಂಗಳೂರು ನಗರ ಸಮಿತಿ ಅಧ್ಯಕ್ಷ ಇಲ್ಯಾಸ್ ಬೆಂಗರೆ ಸಂತಾಪ ವ್ಯಕ್ತಪಡಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply