Connect with us

LATEST NEWS

ಹೆಬ್ರಿಯಲ್ಲಿ ಹುಲಿ ಚರ್ಮ ಅಕ್ರಮ ಸಾಗಾಟ : 7 ಮಂದಿ ಬಂಧನ..!

ಉಡುಪಿ : ಅಕ್ರಮವಾಗಿ ಬೈಕಿನಲ್ಲಿ ಸಾಗಾಟ ಮಾಡುತ್ತಿದ್ದ ಹುಲಿ ಚರ್ಮ, ಹುಲಿಯ ಉಗುರುಗಳನ್ನು ಉಡುಪಿ ಜಿಲ್ಲೆಯ ಹೆಬ್ರಿ‌ ಪೋಲಿಸರು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಹೆಬ್ರಿ ಠಾಣಾ ವ್ಯಾಪ್ತಿಯ ಸೋಮೇಶ್ವರ ಚೆಕ್ ಪೋಸ್ಟ್ ನಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಈ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಹುಬ್ಬಳ್ಳಿ ಯಿಂದ ಮಂಗಳೂರು ಕಡೆಗೆ ಈ ಹುಲಿ ಚರ್ಮ, ಹುಲಿಯ ಉಗುರುಗಳನ್ನು ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಎರಡು ಬೈಕ್ ನಲ್ಲಿ ಐದು ಮಂದಿ ಹುಲಿ ಚರ್ಮ ಸಾಗಿಸುತ್ತಿದ್ದರು. ಐದು ಮಂದಿಯನ್ನು ಸ್ಥಳದಲ್ಲೇ ವಶಕ್ಕೆ ಪಡೆದು ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಇಬ್ಬರನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ.

ಅಕ್ರಮ ಜಾಲದ ಒಟ್ಟು 7 ಮಂದಿ ಯುವಕರನ್ನು ಬಂಧಿಸಿ ಎರಡು ಬೈಕ್ , ಮೊಬೈಲ್ ಫೋನ್ ಗಳನ್ನು ಆರೋಪಿಗಳಿಂದ ವಶಕ್ಕೆ ಪಡೆದಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *