Connect with us

    LATEST NEWS

    ಮಾಸ್ಕ್ ಸರಿಯಾಗಿ ಹಾಕಿಲ್ಲ ಎಂದು ನಡುರಸ್ತೆಯಲ್ಲಿ ವ್ಯಕ್ತಿಯೊಬ್ಬರನ್ನು ಹಿಗ್ಗಾಮುಗ್ಗ ಥಳಿಸಿದ ಪೊಲೀಸರು…!!

    ಇಂದೋರ್ : ಸರಿಯಾಗಿ ಮಾಸ್ಕ್ ಹಾಕಿಲ್ಲವೆಂದು ಪೊಲೀಸರು ವ್ಯಕ್ತಿಯೊಬ್ಬನನ್ನು ಹಿಡಿದು ಬೀದಿಯಲ್ಲಿ ಮನಸೋ ಇಚ್ಚೆ ಥಳಿಸಿರುವ ಘಟನೆ ಮಧ್ಯಪ್ರದೇಶದ ಇಂಧೋರ್‌ನಲ್ಲಿ ನಡೆದಿದೆ.

    ಆಟೋ ಚಾಲಕ ಕೃಷ್ಣ ಕೀಯೆರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ತನ್ನ ತಂದೆಯನ್ನು ಭೇಟಿ ಮಾಡಲು ತೆರಳಿದ್ದರು. ಈ ವೇಳೆ ಮಾಸ್ಕ್​ ಅನ್ನು ಸರಿಯಾಗಿ ಧರಿಸದೇ ಮೂಗಿನ ಕೆಳಗೆ ಜಾರಿಸಿಕೊಂಡಿದ್ದನ್ನು ಮಾರ್ಗ ಮಧ್ಯೆ ಪೊಲೀಸರು ಗಮನಿಸಿ ಅವರನ್ನು ತಡೆದಿದ್ದಾರೆ. ಬಳಿಕ ಪೊಲೀಸ್​ ಠಾಣೆಗೆ ಬರುವಂತೆ ಹೇಳಿದ್ದಾರೆ. ಆದರೆ, ಕೃಷ್ಣ ಅವರು ಠಾಣೆಗೆ ಬರಲು ನಿರಾಕರಿಸಿದಾಗ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಈ ದೃಶ್ಯವನ್ನು ದಾರಿಹೋಕರು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ ಕೃಷ್ಣ ಅವರನ್ನು ನೆಲಕ್ಕೆ ಬೀಳಿಸಿ ಪೊಲೀಸರು ಕಾಲಿನಿಂದ ಜಾಡಿಸಿ ಒದೆಯುತ್ತಿರುವ ದೃಶ್ಯವಿದೆ. ಈ ವೇಳೆ ಕೃಷ್ಣ ಅವರು ನೋವಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಒದ್ದಾಡಿದರು. ಇದೇ ವೇಳೆ ಕೃಷ್ಣ ಜತೆ ಬಂದಿದ್ದ ಅವರ ಮಗ, ತಂದೆಗೆ ಪೊಲೀಸರು ಥಳಿಸುವುದನ್ನು ನೋಡಿ ಸಹಾಯಕ್ಕಾಗಿ ಕೂಗಿಕೊಂಡ ದೃಶ್ಯ ಮನಕಲಕುವಂತಿದೆ.

     

    ಕರೊನಾ ತಡೆಗಟ್ಟಲು ಮಾಸ್ಕ್​ ಕಡ್ಡಾಯ ಎಂಬುದು ಎಲ್ಲರಿಗೂ ತಿಳಿದಿದೆ. ಅದರಲ್ಲೂ ದೇಶದಲ್ಲಿ ಎರಡನೇ ಅಲೆ ಇದೆ. ಈ ಸಮಯದಲ್ಲಿ ಮಾಸ್ಕ್​ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ತುಂಬಾ ಮುಖ್ಯ. ಹಾಗಂತ ಮಾಸ್ಕ್​ ಸರಿಯಾಗಿ ಧರಿಸದಿದ್ದರೆ ದಂಡ ವಿಧಿಸಬೇಕು. ಅದನ್ನು ಬಿಟ್ಟು ಹಿಗ್ಗಾಮುಗ್ಗಾ ಥಳಿಸುವುದೆಂದರೆ ಅದು ಮೃಗತ್ವಕ್ಕಿಂತ ಕಡೆ ಎನ್ನಬಹುದು.

    Share Information
    Advertisement
    Click to comment

    You must be logged in to post a comment Login

    Leave a Reply