Connect with us

  DAKSHINA KANNADA

  ಕಾಂಗ್ರೆಸ್ ಹಿರಿಯ ನಾಯಕ ಪದ್ಮನಾಭ ನರಿಂಗಾನ (77) ಹೃದಯಾಘಾತದಿಂದ ನಿಧನ..!

  ಉಳ್ಳಾಲ : ಕಾಂಗ್ರೆಸ್ ಹಿರಿಯ ನಾಯಕ ಪದ್ಮನಾಭ ನರಿಂಗಾನ (77) ಅವರು ಹೃದಯಾಘಾತದಿಂದ ಬುಧವಾರ ನಗರದ ಖಾಸಗಿ‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

   

  ಸಮಾಜಸೇವೆಯೊಂದಿಗೆ ಅನೇಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದ ಅವರಿಗೆ ಮಂಗಳವಾರ ಸಂಜೆ ಎದೆ ನೋವು ಕಾಣಿಸಿಕೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬುಧವಾರ ಮಧ್ಯಾಹ್ನ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅಪರೂಪದ ಪ್ರಾಮಾಣಿಕ ರಾಜಕೀಯ, ಸಾಮಾಜಿಕ ಕಾರ್ಯಕರ್ತರಾಗಿದ್ದ ಪದ್ಮನಾಭ ಅವರು ಸಾಮಾನ್ಯ ಬಡತನದ ಕುಟುಂಬದಿಂದ ಬಂದು ತನ್ನ ಅಪರಿಮಿತ ಶ್ರಮ ಹಾಗೂ ಬದ್ಧತೆಯಿಂದ ಸಾಮಾಜಿಕ ಕ್ಷೇತ್ರ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಮೇಲೆ ಬಂದವರು. ಎರಡು ಬಾರಿ ನರಿಂಗಾನ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದಲ್ಲದೆ ಪಂಚಾಯತ್ ಉಪಾಧ್ಯಕ್ಷರೂ ಆಗಿದ್ದರು‌. ಅಹಿಂದ ಜಿಲ್ಲಾಧ್ಯಕ್ಷ, ನರಿಂಗಾನ ಕಂಬಳ ಸಮಿತಿ ಗೌರವ ಸಲಹೆಗಾರ, ನರಿಂಗಾನ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ‌‌ ಬಾರಿ‌ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೂ ಪದ್ಮನಾಭ ಭಾಜನರಾಗಿದ್ದರು.ಮೃತರು ಪತ್ನಿ, ಇಬ್ಬರು ಪುತ್ರಿಯರು, ಪುತ್ರ, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ನಿಧನಕ್ಕೆ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್, ಮಾಜಿ ಸಚಿವ ಬಿ ರಮನಾಥ ರೈ, ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಫೆಬ್ರವರಿ 8 ರಂದು ನರಿಂಗಾಣದಲ್ಲಿ ಅಂತ್ಯಕ್ರೀಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

  ಪದ್ಮನಾಭ ನರಿಂಗಾನ ನಿಧನಕ್ಕೆ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ಸಂತಾಪ
  ಹಿರಿಯ ಕಾಂಗ್ರೆಸ್ ಮುಖಂಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪದ್ಮನಾಭ ನರಿಂಗಾನ ಅವರ ನಿಧನಕ್ಕೆ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ತೀವ್ರ ಸಂತಾಪ ಸೂಚಿಸಿದೆ.ಹಲವು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದ ಪದ್ಮನಾಭ ನರಿಂಗಾನ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಧಾರ್ಮಿಕ-ಸಾಮಾಜಿಕ ರಂಗಗಳಲ್ಲಿ ಸಕ್ರೀಯರಾಗಿದ್ದು, ಅಹಿಂದ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದರು. ಅಪರಿಮಿತ ಶ್ರಮ, ಬದ್ಧತೆಯಿಂದ ರಾಜಕೀಯ ಕ್ಷೇತ್ರದಲ್ಲಿ ಮೇಲೆ ಬಂದವರು. ಪ್ರಾಮಾಣಿಕ ರಾಜಕಾರಣಿಯಾಗಿ ಪಕ್ಷದಲ್ಲಿ ಗುರುತಿಸಿಕೊಂಡು ಎಲ್ಲರ ಪ್ರೀತಿ ಪಾತ್ರರಾಗಿದ್ದರು. ಅವರ ನಿಧನ ನಮಗೆಲ್ಲಾ ಆಘಾತ ಉಂಟುಮಾಡಿದ್ದು, ಪಕ್ಷಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ-ಅನುಯಾಯಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮಾಜಿ ಕೇಂದ್ರ ಸಚಿವರಾದ ಬಿ.ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿ, ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ, ಗಂಗಾಧರ್ ಗೌಡ, ಮಾಜಿ ಸಂಸದ ಬಿ.ಇಬ್ರಾಹೀಂ, ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕರಾದ ವಿಜಯ್ ಕುಮಾರ್ ಶೆಟ್ಟಿ, ಎನ್.ಎಂ.ಅಡ್ಯಂತಾಯ, ಮೊಹಮ್ಮದ್ ಮಸೂದ್, ವಸಂತ್ ಬಂಗೇರ, ಶಕುಂತಲಾ ಶೆಟ್ಟಿ, ಜೆ.ಆರ್.ಲೋಬೊ, ಐವನ್ ಡಿಸೋಜಾ, ಮುಖಂಡರಾದ ಕೋಡಿಜಾಲ್ ಇಬ್ರಾಹೀಂ, ಎ.ಸಿ.ಭಂಡಾರಿ, ಬಿ.ಎಚ್.ಖಾದರ್, ಯು.ಕೆ.ಮೋನು, ಶಶಿಧರ್ ಹೆಗ್ಡೆ, ಸುರೇಶ್ ಬಳ್ಳಾಲ್, ಸದಾಶಿವ್ ಉಳ್ಳಾಲ್, ಪಿ.ವಿ.ಮೋಹನ್, ಧನಜಂಯ ಅಡ್ಪಂಗಯ, ರಾಕೇಶ್ ಮಲ್ಲಿ, ಜಿ.ಕೃಷ್ಣಪ್ಪ, ಇನಾಯತ್ ಅಲಿ, ಮಿಥುನ್ ರೈ, ಯು.ಟಿ.ಇಫ್ತಿಕಾರ್, ರಕ್ಷಿತ್ ಶಿವರಾಂ, ಪದ್ಮರಾಜ್.ಆರ್, ಮಮತಾ ಗಟ್ಟಿ, ಜಿ.ಎ.ಬಾವ, ಅಶ್ವಿನ್ ಕುಮಾರ್ ರೈ, ಅಬ್ದುಲ್ ರವೂಫ್, ವಿವೇಕ್ ರಾಜ್ ಪೂಜಾರಿ, ಲುಕ್ಮಾನ್ ಬಂಟ್ವಾಳ್, ಶಾಲೆಟ್ ಪಿಂಟೋ, ಜೋಕಿಂ ಡಿಸೋಜ, ಕೆ.ಕೆ ಶಾಹುಲ್ ಹಮೀದ್, ವಿಶ್ವಾಸ್ ಕುಮಾರ್ ದಾಸ್, ಶೇಖರ್ ಕುಕ್ಕೇಡಿ, ನಾರಾಯಣ ನಾಯ್ಕ್, ಮೊಹನ್ ಗೌಡ ಕಲ್ಮಂಜ, ಮನೋರಾಜ್ ರಾಜೀವ, ಡಾ.ಶೇಖರ್ ಪೂಜಾರಿ, ಉಲ್ಲಾಸ್ ಕೋಟ್ಯಾನ್, ಶುಭಾಷ್ಚ್ರಂದ್ರ ಕೊಲ್ನಾಡ್, ಲಾರೆನ್ಸ್ ಡಿಸೋಜ, ಬಿ.ಎಂ.ಅಬ್ಬಾಸ್ ಅಲಿ, ಅಬೂ ಸಮೀರ್, ಸುದರ್ಶನ್ ಜೈನ್, ಕೌಶಲ್ ಪ್ರಸಾದ್, ಬ್ಲಾಕ್ ಅಧ್ಯಕ್ಷರಾದ ಪ್ರಶಾಂತ್ ಕಾಜೆವಾ, ಸತೀಶ್ ಬಂಗೇರ, ನಾಗೇಶ್ ಕುಮಾರ್ ಗೌಡ, ವೆಲೇರಿಯನ್ ಸಿಕ್ವೇರ, ಮೋಹನ್ ಕೋಟ್ಯಾನ್, ಪುರುಷೋತ್ತಮ ಚಿತ್ರಾಪುರ, ಸುರೇಂದ್ರ ಕಂಬ್ಳಿ, ಪ್ರಕಾಶ್ ಸಾಲ್ಯಾನ್, ಅಬ್ದುಲ್ ಸಲೀಂ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಎಂ. ಬಿ ವಿಶ್ವನಾಥ ರೈ, ಡಾ.ರಾಜಾರಾಂ, ಪಿ.ಸಿ.ಜಯರಾಂ, ಸುಧೀರ್ ಕುಮಾರ್ ಶೆಟ್ಟಿ, ಕೆಪಿಸಿಸಿ ಸದಸ್ಯರಾದ ಮೋಹನ್ ಶೆಟ್ಟಿಗಾರ್, ಕೇಶವ್ ಗೌಡ, ಚಂದ್ರಹಾಸ ಸನಿಲ್, ವಸಂತ್ ಬೆರ್ನಾಡ್, ಆರ್.ಕೆ.ಪೃಥ್ವಿರಾಜ್, ಎಸ್.ಅಪ್ಪಿ, ಉಮ್ಮರ್ ಫಾರೂಕ್ ಪುದು, ಪೀಯೂಸ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಸ್.ಮೊಹಮ್ಮದ್, ಭರತ್ ಮುಂಡೋಡಿ, ಚಂದ್ರಹಾಸ ಕರ್ಕೇರ, ಸತೀಶ್ ಕುಮಾರ್ ಕೆಡಿಂಜೆ, ನೀರಜ್ ಚಂದ್ರಪಾಲ್, ಟಿ.ಕೆ.ಸುಧೀರ್, ಶಬ್ಬೀರ್ ಎಸ್, ಮೊಹಮ್ಮದ್ ಕುಂಜತ್ತಬೈಲ್, ಬಶೀರ್ ಬೈಕಂಪಾಡಿ ಮೊದಲಾದವರು ತೀವ್ರ ಸಂಪಾತ ಸೂಚಿಸಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply