Connect with us

    KARNATAKA

    ಚಾಲಕನ ಪ್ರಾಣ ಉಳಿಸಿತು ಸೀಟ್​ ಬೆಲ್ಟ್, ಡಿವೈಡರ್​ಗೆ ಗುದ್ದಿ ಮೂರು ಪಲ್ಟಿ ಹೊಡೆದ್ರೂ ಗಾಯವಿಲ್ಲದೇ ಪಾರಾದ ಯುವಕ..!

    ​ಬೆಂಗಳೂರು : ಡಿವೈಡರ್​ಗೆ ಗುದ್ದಿ ಮೂರು ಪಲ್ಟಿ ಹೊಡೆದ್ರೂ ಗಾಯವಿಲ್ಲದೇ ಪಾರಾದ ಯುವಕನ ಜೀವ ಉಳಿಸಿತ್ತು ಆ ಕಾರಿನ ಸೀಟ್ ಬೆಲ್ಟ್.

    ಹೌದು ಕಾರು ಚಲಾಯಿಸುವಾಗ ಕಡ್ಡಾಯವಾಗಿ ಸೀಟ್​ ಬೆಲ್ಟ್ ಧರಿಸಿ ಎಂದು ಸಂಚಾರಿ ಪೊಲೀಸರು ನಿರಂತರ ಜಾಗೃತಿ ಮೂಡಿಸುತ್ತಿದ್ರೆ ಅದರ ಫಲಿತಾಂಶ ಮಾತ್ರ ಅಷ್ಟಕಷ್ಟೆ.ಸೀಟ್​ ಬೆಲ್ಟ್​​ ಧರಿಸದೆ ಅನೇಕರು ವಾಹನ ಚಲಾಯಿಸುತ್ತಿದ್ದು, ಅನೇಕರು ಇದರಿಂದ ಪ್ರಾಣಕಳಕೊಂಡಿದ್ದಾರೆ. ಆದ್ರೆ ಈ ಪ್ರಕರಣದಲ್ಲಿ ಯುವಕ ಸಂಚಾರಿ ನಿಯಮ ಪಾಲಿಸಿದ್ದರಿಂದ ಪ್ರಾಣ ಉಳಿದಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್​ಗೆ ಗುದ್ದಿ ಗಾಳಿಯಲ್ಲಿ ಮೂರು ಬಾರಿ ಪಲ್ಟಿ ಹೊಡೆದಿದೆ. ಬೆಂಗಳೂರಿನಿಂದ ಮೈಸೂರಿಗೆ ಓರ್ವ ಯುವಕ ಕಾರಿನಲ್ಲಿ ಹೊರಟಿದ್ದ. ದಾರಿ ಮಧ್ಯೆ ಕಾರಿನ ಟೈರ್ ಬ್ಲಾಸ್ಟ್ ಆಗಿದೆ. ಕಾರು ಚಾಲಕ ಸೀಟ್​ ಬೆಲ್ಟ್​ ಧರಿಸಿದ್ದರಿಂದ ಪ್ರಾಣ ಉಳಿದಿದೆ. ಕಾರಿನ ಏರ್ ಬ್ಯಾಗ್ ಎಲ್ಲವೂ ಓಪನ್ ಆಗಿದೆ. ಇದರಿಂದ ಚಿಕ್ಕ ಗಾಯವಿಲ್ಲದೆ ಯವಕ ಬಚಾವ್​ ಆಗಿದ್ದಾನೆ. ಹೆದ್ದಾರಿ ಡಿವೈಡರ್ ಕೂಡ ಪೀಸ್ ಪೀಸ್ ಆಗಿದ್ದರೆ, ಸೂಚನಾ ಫಲಕ ಸರ್ವೀಸ್ ರಸ್ತೆಗೆ ಬಿದ್ದಿದೆ ಆದ್ರೆ ಆ ಸೀಟ್ ಬೆಲ್ಟ್ ಆ ಯುವಕನ ಜೀವ ರಕ್ಷಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply