Connect with us

    LATEST NEWS

    ಮದುವೆ ಹಾಲ್ ನಲ್ಲಿ ಕೋಳಿ ಅಂಕ – ನವ ಜೋಡಿಗಳ ಕೋಳಿ ಫೈಟ್

    ಉಡುಪಿ ಡಿಸೆಂಬರ್ 11: ಮದುವೆ ಸಮಾರಂಭ ಅವಿಸ್ಮರಣಿಯವಾಗಿಸಲು ಈಗ ವಿವಿಧ ರೀತಿ ಕಸರತ್ತುಗಳನ್ನು ಜನರು ಮಾಡುತ್ತಿದ್ದಾರೆ. ಮದುವೆ ಮನೆಗೆ ವಧುವರರ ಎಂಟ್ರಿ ವೇಳೆ ವಿಭಿನ್ನ ಕಾನ್ಸೆಪ್ಟ್ ಗಳ ಮೂಲಕ ಮದುವ ಸಮಾರಂಭ ಒಂದು ಅವಿಸ್ಮರಣಿಯ ಕ್ಷಣವಾಗಿ ಮಾಡುತ್ತಾರೆ. ಅದೇ ರೀತಿ ಬ್ರಹ್ಮಾವರದಲ್ಲೊಂದು ಮದುವೆ ನಡೆದಿದ್ದು, ಅಲ್ಲಿ ನವಜೋಡಿಗಳ ಕೋಳಿ ಪೈಟ್ ಕೂಡ ನಡೆದಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ.


    ವಧು ವರರ ಪ್ರಿ ವೆಡ್ಡಿಂಗ್- ಪೋಸ್ಟ್ ವೆಡ್ಡಿಂಗ್ ನ ಡಿಫರೆಂಟ್ ಕಾನ್ಸೆಪ್ಟ್ ಗಳು ಆಗಾಗ ಸುದ್ದಿಯಾಗುತ್ತಿರುತ್ತದೆ. ಉಡುಪಿ ಜಿಲ್ಲೆ ಬ್ರಹ್ಮಾವರದಲ್ಲಿ ನಡೆದ ಮಿಥುನ್ ಮತ್ತು ಪೂಜಾ ಮದುವೆ ಸಮಾರಂಭದಲ್ಲಿ ಡಿಫರೆಂಟ್ ಕಾನ್ಸೆಪ್ಟ್ ಗಳನ್ನು ಗೆಳೆಯರು ಅರೇಂಜ್ ಮಾಡಿದ್ದರು.
    ವರ ಮತ್ತು ವಧು ಜೆಸಿಬಿ ಯಲ್ಲಿ ಮದುವೆ ಹಾಲ್ ಗೆ ಬಂದು ಗಮನ ಸೆಳೆದರು. ಜೆಸಿಬಿಯನ್ನು ಹೂವಿನಿಂದ ಸಿಂಗಾರ ಮಾಡಿ, ಸ್ಪೆಷಲ್ ಸೋಫಾವನ್ನು ಮುಂಭಾಗಕ್ಕೆ ಜೊಡಿಸಿ ಅದರಲ್ಲಿ ವರವಧು ಕುಳಿತು ಮದುವೆ ಹಾಲ್ ಗೆ ಎಂಟ್ರಿ ಕೊಟ್ಟಿದ್ದಾರೆ. ಇಷ್ಟಕ್ಕೆ ಮುಗಿದಿಲ್ಲ, ಮದುವೆ ಮಂಟಪದಲ್ಲಿ ಮದುಮಗ ಮತ್ತು ಮದುಮಗಳಿದ ಕೋಳಿ ಅಂಕದ ಪ್ರಾತ್ಯಕ್ಷಿಕೆ ನಡೆದಿದೆ. ಮಿಥುನ್ ಮತ್ತು ಪೂಜಾ ಅಂಕದ ಕೋಳಿಗಳನ್ನು ಫೈಟ್ ಮಾಡಿಸಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಓಡಾಡುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply