Connect with us

    LATEST NEWS

    ಮಾರ್ಚ್ 21 ರಿಂದ ಏಪ್ರಿಲ್ 7 ರವರೆಗೆ ಶಾಲಾ ಪರೀಕ್ಷೆ

    ಮಾರ್ಚ್ 21 ರಿಂದ ಏಪ್ರಿಲ್ 7 ರವರೆಗೆ ಶಾಲಾ ಪರೀಕ್ಷೆ

    ಮಂಗಳೂರು ಮಾರ್ಚ್ 7 ; ಜಿಲ್ಲೆಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕರ್ತವ್ಯದ ದಿನಗಳು ಎಪ್ರಿಲ್ 10 ರವರೆಗೆ ಸದುಪಯೋಗವಾಗಬೇಕಿದ್ದು, ಶಾಲಾ ಕರ್ತವ್ಯದ ದಿನಗಳನ್ನು ಸಮರ್ಪಕವಾಗಿ ಬಳಸಿಕೊಂಡು 1 ರಿಂದ 9ನೇ ತರಗತಿಗಳ ಪರೀಕ್ಷೆಗಳನ್ನು ನಡೆಸಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ.

    ಅದರಂತೆ ಜಿಲ್ಲೆಯ ಎಲ್ಲಾ ಸರ್ಕಾರಿ/ಅನುದಾನಿತ/ಅನುದಾನ ರಹಿತ ಪ್ರಾಥಮಿಕ ಶಾಲೆಗಳಲ್ಲಿ 1 ರಿಂದ 7ನೇ ತರಗತಿಗಳ ಪರೀಕ್ಷೆಗಳನ್ನು ಮಾರ್ಚ್ 21 ರಿಂದ ಏಪ್ರಿಲ್ 7 ರ ಅವಧಿಯಲ್ಲಿ ಶಾಲಾ ಹಂತದ ವೇಳಾ ಪಟ್ಟಿಯನ್ನು ತಯಾರಿಸಿ ಕೊಂಡು ಪರೀಕ್ಷೆಗಳನ್ನು ನಡೆಸಲು ಹಾಗೂ ಸರ್ಕಾರಿ/ಅನುದಾನಿತ/ಅನುದಾನ ರಹಿತ ಪ್ರೌಢ ಮತ್ತು ಉನ್ನತೀಕರಿಸಿದ ಹಿ.ಪ್ರಾ.ಶಾಲೆಗಳಲ್ಲಿ 8 ಮತ್ತು 9ನೇ ತರಗತಿ ಪರೀಕ್ಷೆಗಳನ್ನು ಕೆಳಗಿನ ಮಾದರಿ ವೇಳಾಪಟ್ಟಿಯಂತೆ ಆಯಾ ವಿಷಯ ಶಿಕ್ಷಕರೇ (1-9ನೇ ತರಗತಿವರೆಗೆ) ನೀಲ ನಕಾಶೆಯನ್ವಯ ಪ್ರಶ್ನೆ ಪತ್ರಿಕೆಗಳನ್ನು ರಚಿಸಿ ನಡೆಸಲು ಜಿಲ್ಲೆಯ ಎಲ್ಲಾ ಶಾಲಾ ಮುಖ್ಯಸ್ಥರುಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

    8 ಮತ್ತು 9ನೇ ತರಗತಿಗಳ ಮಾದರಿ ವೇಳಾಪಟ್ಟಿ

    ದಿನಾಂಕ          ವಾರ  8ನೇ ತರಗತಿ ಸಮಯ ಪೂರ್ವಾಹ್ನ 9ನೇ ತರಗತಿ ಸಮಯ ಪೂರ್ವಾಹ್ನ
    21.03.2018 ಬುಧವಾರ ಗಣಿತ 10:00-11:30 ಸಮಾಜ ವಿಜ್ಞಾನ 10:00-01:00
    24.03.2018 ಶನಿವಾರ ತೃತೀಯ ಭಾಷೆ 10:00-11:15 ಪ್ರಥಮ ಭಾಷೆ 10:00-01:00
    27.03.2018 ಮಂಗಳವಾರ ಸಮಾಜ ವಿಜ್ಞಾನ 10:00-11:30 ಗಣಿತ 10:00-01:00
    31.03.2018 ಶನಿವಾರ ದ್ವಿತೀಯ ಭಾಷೆ 10:00-11:15 ತೃತೀಯ ಭಾಷೆ 10:00-12:30
    03.04.2018 ಮಂಗಳವಾರ ಪ್ರಥಮ ಭಾಷೆ 10:00-11:30 ವಿಜ್ಞಾನ 10:00-01:00
    05.04.2018 ಗುರುವಾರ ವಿಜ್ಞಾನ 10:00-11:30 ದ್ವಿತೀಯ ಭಾಷೆ 10:00-12:30

    Share Information
    Advertisement
    Click to comment

    You must be logged in to post a comment Login

    Leave a Reply